ಮದುವೆ ನಿಶ್ಚಿತಾರ್ಥ ನಡೆದ ಯುವತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಮದುವೆ ನಿಶ್ಚಿತಾರ್ಥ ನಡೆದ ಯುವತಿ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ.ಮುಂಡ್ಯತ್ತಡ್ಕ ಬಳಿಯ ಬಿಸಿ ರೋಡ್ ಪಾಡ್ಲಡ್ಕ ಎಂಬಲ್ಲಿನ ದಿ| ಮಂಞನಾಡಿ ಮೊಯ್ದೀನ್ ಕುಂಞಿ ಎಂಬವರ ಪುತ್ರಿ ಫಾತಿಮತ್ ಅಲ್ಫೀನ (22) ಎಂಬಾಕೆ ಸಾವಿಗೀಡಾದ ಯುವತಿ. ನಿನ್ನೆ ಸಂಜೆ 6.45ಕ್ಕೆ ಮನೆಯ ಬೆಡ್ ರೂಂಗೆ ತೆರಳಿದ್ದ ಯುವತಿ ದೀರ್ಘ ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಆದ್ದರಿಂದ ಮನೆಯ ವರು ಕರೆದರೂ ಪ್ರತಿಕ್ರಿಯೆ ಉಂಟಾ ಗಿಲ್ಲ. ಈ ಹಿನ್ನೆಲೆಯಲ್ಲಿ ಬಾಗಿಲು ಮುರಿದು ನೋಡಿದಾಗ ಫ್ಯಾನ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಫಾತಿಮತ್ ಅಲ್ಫೀನ ಪತ್ತೆಯಾಗಿದ್ದಾಳೆಂದು ತಿಳಿಸಲಾಗಿದೆ. ಪಳ್ಳತ್ತಡ್ಕ ನಿವಾಸಿಯಾದ ಯುವಕನೊಂದಿಗೆ ಈಕೆಯ ಮದುವೆ ನಿಶ್ಚಯ ನಡೆದಿದ್ದು, ಮುಂದಿನ ಡಿಸೆಂಬರ್ನಲ್ಲಿ ಮದುವೆ ನಡೆಸಲು ನಿರ್ಧರಿಸಲಾಗಿತ್ತೆನ್ನಲಾಗಿದೆ.
ನಿನ್ನೆ ಸಂಜೆ ಸಮೀಪದ ಸಂಬಂಧಿಕರ ಮನೆಗೆ ತೆರಳಿ ಯುವತಿ ಮರಳಿದ್ದಳು. ಆದರೆ ಆತ್ಮಹತ್ಯೆಗೈ ಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲವೆಂದು ಹೇಳಲಾಗುತ್ತಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತಳು ತಾಯಿ ಉಮ್ಮು ಅಲೀಮ, ಸಹೋದರರಾದ ನಿಸಾರ್, ಉನೈಸ್, ನೌಫಲ್, ಆಪು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.