ಕಾಸರಗೋಡು: ಕಾಸರಗೋಡು ನಗರಸಭೆಯ ಒಂದು ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂ.ನ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡು ವಾರ್ಡ್‌ಗಳಲ್ಲಿ ಮುಸ್ಲಿಂಲೀಗ್, ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಸರಗೋಡು ನಗರಸಭೆಯ 24ನೇ ಖಾಸೀಲೇನ್ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ ಹನೀಫ್ ಕೆ.ಎಂ ಗೆಲುವು ಸಾಧಿಸಿ ದ್ದಾರೆ. ಮೊಗ್ರಾಲ್ ಪುತ್ತೂರ್ ಪಂ.ನ ಮೂರನೇ ವಾರ್ಡ್ (ಕೋಟೆ ಕುಂಜೆ)ನಲ್ಲಿ ಪಕ್ಷೇತರ ಅಭ್ಯರ್ಥಿ ಆಸ್ಮಿನಾ ಶಾಫಿ ಗೆಲುವು ಸಾಧಿಸಿದ್ದಾರೆ. ಇದೇ ಪಂಚಾಯತ್‌ನ ೧೪ನೇ ವಾರ್ಡ್ (ಕಲ್ಲಂಗೈ)ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಧರ್ಮಪಾಲ್ ದಾರಿಲ್ಲತ್ ಗೆಲುವು ಸಾಧಿಸಿದ್ದಾರೆ.
