ಎಡನೀರು ಮಠದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ ನಾಳೆಯಿಂದ
ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚತುರ್ಥಚಾತುರ್ಮಾಸ್ಯ ವ್ರತಾಚರಣೆ ಶ್ರೀಮಠದಲ್ಲಿ ಜರಗುತ್ತಿದ್ದು, ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇವರ ಸೇವಾರೂಪದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹ ನಾಳೆ ಪ್ರಾರಂಭವಾಗಲಿದೆ. ಸಂಜೆ 5.30ಕ್ಕೆ ಶ್ರೀಗಳವರ ಸಾನ್ನಿಧ್ಯದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಡಾ| ಟಿ. ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸುವರು. ವಿದ್ವಾನ್ ಪಂಜ ಭಾಸ್ಕರ ಭಟ್ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತೀದಿನ ಸಂಜೆ 6 ಗಂಟೆಯಿAದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ.
ಬೆಳಗ್ಗೆ 10ರಿಂದ ಮಧ್ಯಾಹ್ನ ತನಕ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ವೇದಮೂರ್ತಿ ಪರಕ್ಕಜೆ ಅನಂತ ಭಟ್, ವೇದಮೂರ್ತಿ ಹರಿನಾರಾಯಣ ಮಯ್ಯ ಕಾಸರಗೋಡು ಅವರಿಂದ ಶ್ರೀದೇವೀ ಭಾಗವತ ಪಾರಾಯಣ, ಪ್ರವಚನ ನಡೆಯಲಿದೆ. ನಾಳೆ ಸಂಜೆ ಕಾರ್ತವೀರ್ಯಾರ್ಜುನ ಕಥಾಭಾಗದ ತಾಳಮದ್ದಳೆ ನಡೆಯಲಿದೆ. ಖÁ್ಯತ ಕಲÁವಿದರು ಭಾಗವಹಿಸುವರು.