ಯುವಕ ಹೃದಯಾಘಾತದಿಂದ ನಿಧನ

ಉಪ್ಪಳ: ಪೈವಳಿಕೆ ಭಂಡಾರ ನಿವಾಸಿ ಅಶೋಕ (42) ಹೃದಯಾಘಾತದಿಂದ ನಿಧನರಾ ದರು. ಈ ಹಿಂದೆ ಎರಡು ವರ್ಷಗಳ ಕಾಲ ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದರು. ತಿಂಗಳುಗಳ ಹಿಂದೆ ಊರಿಗೆ ಆಗಮಿಸಿದ್ದರು. ಈ ಮಧ್ಯೆ ಅವರಿಗೆ ಹೃದಯಾಘಾತ ಉಂಟಾಗಿದ್ದು ಅನಂತರ ವಿಶ್ರಾಂತಿ ಯಲ್ಲಿದ್ದರು. ಶನಿವಾರ ರಾತ್ರಿ ಮತ್ತೆ ಹೃದಯಾ ಘಾತವುಂಟಾಗಿದ್ದು ಕೂಡಲೇ ಕಾಸರಗೋಡು ಆಸ್ಪತ್ರೆಗೆ  ಸಾಗಿಸುವ ಮಧ್ಯೆ ನಿಧನರಾದರು.  ಮೃತರು ಪತ್ನಿ ಜಯಶ್ರೀ, ಪುತ್ರ ವಿಯಾನ್, ಸಹೋದರ-ಸಹೋದರಿಯರಾದ ಪರಮೇಶ್ವರ, ಕೃಷ್ಣ, ರಮೇಶ, ರತ್ನಾವತಿ, ಭವಾನಿ, ಲಕ್ಷ್ಮಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರನ್ನು ಅಗಲಿದ್ದಾರೆ. ತಂದೆ ಕೋಚು ಮಡಿವಾಳ, ತಾಯಿ ದೇವಕಿ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಸಿಐಟಿಯು ನೇತಾರ ಎಂ. ಚಂದ್ರ ನಾಯ್ಕ್ ಮಾನಿಪ್ಪಾಡಿ, ಸಿಪಿಎಂ ನೇತಾರರಾದ ಅಬ್ದುಲ್ಲ ಕೆ, ನಾರಾಯಣ ಶೆಟ್ಟಿ, ಶ್ರೀನಿವಾಸ ಭಂಡಾರಿ ಸಹಿತ ವಿವಿಧ ರಾಜಕೀಯ, ಸಾಮಾಜಿಕ ಕಾರ್ಯ ಕರ್ತರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಕಮಿಟಿ, ಕಳಾಯಿ ಬ್ರಾಂಚ್, ಪೈವಳಿಕೆ ಬ್ರಾಂಚ್ ಕಮಿಟಿ, ಡಿವೈಎಫ್‌ಐ ಸಿಐಟಿಯು ಮೊದಲಾದ ಸಂಘಟನೆಗಳು ಸಂತಾಪ ಸೂಚಿಸಿವೆ.

You cannot copy contents of this page