ಆರಿಕ್ಕಾಡಿಯಲ್ಲಿ ಸ್ವಂತ ಹಣದಿಂದ ತಂಗುದಾಣ ನಿರ್ಮಿಸಿ ಮಾದರಿಯಾದ ಸಾಮಾಜಿಕ ಕಾರ್ಯಕರ್ತ

ಕುಂಬಳೆ:  ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ತೆರವುಗೊ ಳಿಸಿದ  ಆರಿಕ್ಕಾಡಿ ಬಸ್ ಪ್ರಯಾಣಿಕರ ತಂಗುದಾಣವನ್ನು ಮರು ಸ್ಥಾಪಿಸಬೇಕೆಂಬ  ನಾಗರಿಕರು ಹಾಗೂ ಪ್ರಯಾಣಿಕರು ಹಲವು ಕಾಲದಿಂದ  ಒತ್ತಾಯಿಸುತ್ತಾ ಬಂದರೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಧಿಕಾರಿಗಳು ಹಾಗೂ ಪಂಚಾಯತ್ ನಿರ್ಲಕ್ಷ್ಯ ನಿಲುವು ತೋರಿಸಿದ ಹಿನ್ನೆಲೆಯಲ್ಲಿ ಮೀನು ಕಾರ್ಮಿಕನೂ, ಸಾಮಾಜಿಕ ಕಾರ್ಯಕರ್ತನೂ ಆದ ಆರಿಫ್ ಕಡವತ್ ಸ್ವಂತ ಹಣ ಖರ್ಚುಮಾಡಿ ತಂಗುದಾಣ ನಿರ್ಮಿಸಿ ದ್ದಾರೆ.  ಬಿಸಿಲು ಹಾಗೂ ಮಳೆಗೆ ಆರಿಕ್ಕಾಡಿಯಲ್ಲಿ ಬಸ್‌ಗಾಗಿ ಕಾದು ನಿಲ್ಲಲು ತಂಗುದಾಣವಿಲ್ಲದಿರುವುದು ಪ್ರಯಾಣಿಕರಿಗೆ ಭಾರೀ ಸಮಸ್ಯೆ ಯಾಗಿ ಪರಿಣಮಿಸಿತ್ತು. ಇದರಿಂದ ಇಲ್ಲಿ ತಂಗುದಾಣ ನಿರ್ಮಿಸುವಂತೆ ನಾಗರಿಕರು ಅಧಿಕಾರಿಗಳನ್ನು ಒತ್ತಾಯಿಸುತ್ತಾ  ಬಂದಿದ್ದಾರೆ.ಆದರೆ ಮಳೆಗಾಲ ಆರಂಭಗೊಂಡರೂ ಜನರ ಬೇಡಿಕೆಯನ್ನು ಪರಿಗಣಿಸಲು ಅಧಿಕಾರಿಗಳು ಮುಂದಾಗಲಿಲ್ಲ.

ಆರಿಕ್ಕಾಡಿ ಪಿಎಚ್‌ಸಿಗೆ ಆಗಮಿಸುವ ರೋಗಿಗಳು,ಮೀನು ಕಾರ್ಮಿಕರು, ಹನುಮಾನ್ ಕ್ಷೇತ್ರಕ್ಕೆ ತಲುಪುವವರು, ಕೋಟೆ ಸಂದರ್ಶಿಸುವವರು ಇದೇ ಸ್ಥಳದಲ್ಲಿ ಬಸ್ ಇಳಿಯುತ್ತಿದ್ದಾರೆ. ಹಾಗೂ ಮರಳಿ ಪ್ರಯಾಣಿಸಲು ಕಾದು ನಿಲ್ಲುತ್ತಿದ್ದಾರೆ. ಮಳೆ ತೀವ್ರಗೊಳ್ಳುವುದರೊಂದಿಗೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಕಂಡು  ಸ್ವಂತವಾಗಿ ಹತ್ತು ಸಾವಿರಕ್ಕೂ ಹೆಚ್ಚು ರೂಪಾಯಿ ಖರ್ಚುಮಾಡಿ ತಾತ್ಕಾಲಿಕ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಆರಿಫ್ ಮಾದರಿಯಾಗಿ ದ್ದಾರೆ. ಆರಿಫ್‌ರ ಈ ಮಾದರಿ ಕಾರ್ಯವನ್ನು ನಾಗರಿಕರು ಅಭಿನಂದಿಸಿದ್ದಾರೆ.

RELATED NEWS

You cannot copy contents of this page