ಮದ್ಯದಮಲಿನಲ್ಲಿ ಗಲಾಟೆ ನಡೆಸಿದ ಇಬ್ಬರ ಬಂಧನ: ಬಂಧಿತರ ಪೈಕಿ ಓರ್ವ ಗಾಂಜಾ ಪ್ರಕರಣದಲ್ಲಿ ವಾರಂಟ್ ಆರೋಪಿ

ಉಪ್ಪಳ: ಮದ್ಯದ ಅಮಲಿನಲ್ಲಿ ಗಲಾಟೆ ನಡೆಸಿದ ಇಬ್ಬರು ಯುವಕ ರನ್ನು ಮಂಜೇಶ್ವರ ಪೊಲೀಸರು  ಬಂಧಿಸಿದ್ದಾರೆ. ಬಾಯಾರುಪದವು ಕ್ಯಾಂಪ್ಕೋ ಸಮೀಪದ ಫಯಾಸ್ (33), ರಾಜಸ್ಥಾನ ನಿವಾಸಿ ಶ್ರೀ ಓಂ ಮೀನಾ (26) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ಸಂಜೆ ೬ ಗಂಟೆಗೆ ಈ ಇಬ್ಬರು ಬಾಯಾರು ಆವಳದಲ್ಲಿ ಮದ್ಯ ಸೇವಿಸಿ ಗಲಾಟೆ ನಡೆಸಿದ್ದಾರೆ. ಇದರಿಂದ ಸಮಸ್ಯೆಗೀ ಡಾದ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲ್ಲಿಗೆ ತಲುಪಿದ ಪೊಲೀಸರು ಫಯಾಸ್ ಹಾಗೂ ಶ್ರೀ ಓಂ ಮೀನಾನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರನ್ನು ಠಾಣೆಗೆ ತಲುಪಿಸಿ ವಿಚಾರಣೆ ನಡೆಸಿದಾಗ ಫಯಾಸ್ ೨೦೨೦ರಲ್ಲಿ ಬದಿಯಡ್ಕ ಪೊಲೀಸರು ದಾಖಲಿಸಿ ಕೊಂಡ ಗಾಂಜಾ ವಶ ಪ್ರಕರಣದಲ್ಲಿ ವಾರಂಟ್ ಆರೋಪಿ ಯಾಗಿದ್ದಾ ನೆಂದು ತಿಳಿದುಬಂದಿದೆ. ಈ ಬಗ್ಗೆ  ಮಂಜೇಶ್ವರ ಪೊಲೀಸರು ನೀಡಿದ ಮಾಹಿತಿಯಂತೆ   ಬದಿ ಯಡ್ಕ ಪೊಲೀಸರು ಮಂಜೇಶ್ವರಕ್ಕೆ ತೆರಳಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಇದೇ ವೇಳೆ ಶ್ರೀ ಓಂ ಮೀ ನಾನನ್ನು ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

RELATED NEWS

You cannot copy contents of this page