ವಿದ್ಯುತ್‌ಚಾಲಿತ ಬೇಲಿಯಿಂದ ಶಾಕ್ ತಗಲಿ ಇಬ್ಬರು ಮೃತ್ಯು

ಪತ್ತನಂತಿಟ್ಟ: ವಿದ್ಯುತ್‌ಚಾಲಿಕ ಬೇಲಿಯಿಂದ  ಶಾಕ್ ತಗಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪತ್ತನಂತಿಟ್ಟ ಪಂದಳಂ ಕುರುಂಬಾಲಿ ತೋಟುಕ್ಕರದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಸ್ಥಳೀಯ ಅರುಣೋದಯ ನಿವಾಸಿಗಳಾದ ಚಂದ್ರಶೇಖರನ್ (65) ಮತ್ತು ಪಿ.ಜೆ. ಗೋಪಾಲ ಪಿಳ್ಳೆ (62) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ೭ಕ್ಕೆ ಈ ಘಟನೆ ನಡೆದಿದೆ. ಇವರಿಬ್ಬರು ಕೃಷಿಕರಾಗಿ ದ್ದಾರೆ. ತಮ್ಮ ಕೃಷಿ ತೋಟಕ್ಕೆ ಕಾಡು ಹಂದಿಗಳು ನುಗ್ಗುವುದನ್ನು ತಡೆಗಟ್ಟಲು ಅವರು ತೋಟದ ಸುತ್ತ ವಿದ್ಯುತ್ ಚಾಲಿತಬೇಲಿ ನಿರ್ಮಿಸಿದ್ದರು. ಇಂದು ಬೆಳಿಗ್ಗೆ ಈ ಇಬ್ಬರ ಪೈಕಿ ಒಬ್ಬರಿಗೆ ಬೇಲಿಯಿಂದ ಶಾಕ್ ತಗಲಿದೆ. ಅದನ್ನು ಕಂಡು ಇನ್ನೋರ್ವರು ಅವರನ್ನು ರಕ್ಷಿಸಲು ಬಂದಾಗ ಅವರಿಗೂ ಶಾಕ್ ತಗಲಿದೆ. ಒಬ್ಬರು ಘಟನೆ ಸ್ಥಳದಲ್ಲೇ ಸಾವನ್ನಪ್ಪ್ಟಿರೆ, ಇನ್ನೋರ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

RELATED NEWS

You cannot copy contents of this page