ಮೀಯಪದವು ಗುರುನರಸಿಂಹ ಯಕ್ಷಬಳಗ ವತಿಯಿಂದ ತಾಳಮದ್ದಳೆ- ಪ್ರಶಸ್ತಿ ಪ್ರದಾನ- ಬಯಲಾಟ 10ರಂದು
ಮೀಯಪದವು : ಶ್ರೀಗುರು ನರಸಿಂಹ ಯಕ್ಷಬಳಗ ಮೀಯಪದವು ತಂಡದ ವಾರ್ಷಿಕ ಕಾರ್ಯಕ್ರಮ’ ಯಕ್ಷಚಿಗುರು 2024′ ಅಗೋಸ್ತು 10ರಂದು ಅಪರಾಹ್ನ ಗಂಟೆ 2ರಿಂದ ದೇಲಂತೊಟ್ಟು ಬಜೆ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ಜರಗಲಿದೆ.
ಪ್ರಸಿದ್ದ ಕಲಾವಿದರಿಂದ ತಾಳ ಮದ್ದಳೆ ‘ಕರ್ಣಭೇದನ’ ನಡೆಯಲಿದ್ದು ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಲವಕುಮಾರ್ ಐಲ, ವಂದನಾ ಮಾಲೆಂಕಿ, ಅರ್ಥದಾರಿಗಳಾಗಿ ವಾಸು ದೇವರಂಗಾ ಭಟ್ ಮಧೂರು, ಜಯ ಪ್ರಕಾಶ ಶೆಟ್ಟಿ ಪೆರ್ಮುದೆ, ನಾ.ಕಾರಂತ ಪೆರಾಜೆ ಭಾಗವಹಿಸುವರು.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ.ಗಿರಿಧರ ರಾವ್ ಎಂ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಜಗದೀಶ ಶೆಟ್ಟಿ ಎಲಿಯಾಣ ಸತೀಶ ಅಡಪ, ದಾಮೋದರ ಮಯ್ಯ ಬಜೆ, ದೇವಕಾನ ಶ್ರೀಕೃಷ್ಣ ಭಟ್ ಉಪಸ್ಥಿತರಿರುವರು.
ಯಕ್ಷಚಿಗುರು-24 ವಾರ್ಷಿಕ ಪ್ರಶಸ್ತಿಯನ್ನು ಗಣೇಶ ಕಲಾವೃಂದ ಪೈವಳಿಕೆ ಕಲಾ ಸಂಸ್ಥೆಗೆ ನೀಡಲಾಗು ವುದು. ಸಂಜೆ ಗಂಟೆ 6ರಿಂದ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಸದಸ್ಯರಿಂದ ಯಕ್ಷಗಾನ ಬಯಲಾಟ ‘ದಕ್ಷಾಧ್ವರ ಗಿರಿಜಾಕಲ್ಯಾಣ’ ಜರಗಲಿದೆ.