ಅನಧಿಕೃತ ಮರಳುಗಾರಿಕೆ: 12 ದೋಣಿಗಳ ನಾಶ

ಕುಂಬಳೆ: ಮೊಗ್ರಾಲ್ ಹೊಳೆಯಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ 10 ದೋಣಿಗಳನ್ನು ಡಿವೈಎಸ್ಪಿ ಸುನಿಲ್ ಕುಮಾರ್ ಹಾಗೂ ಎಸ್‌ಐ ಶ್ರೀಜೇಶ್ ಕೆ ನೇತೃತ್ವದ ಪೊಲೀಸರು ಪತ್ತೆಹಚ್ಚಿ ನಾಶಪಡಿಸಿದ್ದಾರೆ.  ನಿನ್ನೆ ಸಂಜೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹೊಳೆಯ ನೀರಿನೊಳಗೆ ಹಾಗೂ ಸಮೀಪದ ಪೊದೆಗಳೆಡೆಯಲ್ಲಿ 10 ದೋಣಿಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಬಳಿಕ ಅವುಗಳನ್ನು ಜೆಸಿಬಿ ಬಳಸಿ ಪುಡಿಗೈಯ್ಯಲಾಯಿತು. ಅನಧಿಕೃತ ಹೊಯ್ಗೆ ಸಂಗ್ರಹ ಹಾಗೂ  ಸಾಗಾಟವನ್ನು ಪತ್ತೆಹ ಚ್ಚಲು ಮೊಗ್ರಾಲ್ ಹಾಗೂ ಶಿರಿಯ ಹೊಳೆಯ ಕಡವು ಬದಿ ಪೊಲೀಸರು ಸಿಸಿ ಕ್ಯಾಮರಾ ಅಳವಡಿಸುತ್ತಿದ್ದಾರೆ. ಅದರಲ್ಲಿ  ಸೆರೆಯಾದ ದೃಶ್ಯವನ್ನು ಅನುಸರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

RELATED NEWS

You cannot copy contents of this page