ಮಂಗಲ್ಪಾಡಿ ಜನಪರ ಹೋಟೆಲ್‌ನಿಂದ ಕಳವುಗೈದ ಫೋನ್, ಬ್ಯಾಂಕ್‌ಪಾಸ್ ಬುಕ್ ಪತ್ತೆ

ಉಪ್ಪಳ: ಐಲ ಮೈದಾನ ಬಳಿ ಕಾರ್ಯಾಚರಿಸುತ್ತಿರುವ ಮಂಗಲ್ಪಾಡಿ ಪಂಚಾಯತ್ ಜನಪರ ಹೋಟೆಲ್‌ನಿಂದ ಕಳವುಗೈದ ಫೋನ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಪತ್ತೆಯಾಗಿದೆ. ಮೊನ್ನೆ ರಾತ್ರಿ ಕಳವು ಕೃತ್ಯ ನಡೆದಿತ್ತು. ನಿನ್ನೆ ಬೆಳಿಗ್ಗೆ ಹೋಟೆಲ್‌ಗೆ ಕಾರ್ಮಿಕೆಯರು ತಲುಪಿದಾಗ ಅಡುಗೆ ಕೋಣೆಯ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಬಳಿಕ ಒಳಗೆ ಹೋಗಿ ನೋಡಿದಾಗ ಮೇಜಿನ ಡ್ರವರ್‌ನಲ್ಲಿದ್ದ ಮೊಬೈಲ್ ಫೋನ್, ಚಿಲ್ಲರೆ ಹಣ, ಬ್ಯಾಂಕ್ ಪಾಸ್ ಪುಸ್ತಕ ಒಳಗೊಂಡ ಚೀಲ ಕಳವುಹೋಗಿತ್ತು. ಈ ಬಗ್ಗೆ ಹೋಟೆಲ್‌ನ ಅಧ್ಯಕ್ಷೆ ಸುಶೀಲ ಕೆ.ವಿ. ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ತನಿಖೆ ನಡೆಸಿದ್ದು, ಸಂಜೆ ವೇಳೆಗೆ ಕಟ್ಟಿಗೆ ಹಾಕುವ ಸ್ಥಳದಲ್ಲಿ ಫೋನ್ ಹಾಗೂ ಪಾಸ್ ಪುಸ್ತಕ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಣವನ್ನು ಕಳ್ಳರು ಕೊಂಡುಹೋಗಿದ್ದಾರೆ. ಇದೇ ಪರಿಸರದ ದಿ| ಧನಂಜಯ ಎಂಬವರ ಬೀಗ ಜಡಿದ ಮನೆಯ ಬಾಗಿಲನ್ನು ಮುರಿದು ಕಳವು ಯತ್ನ ನಡೆಸಲಾಗಿತ್ತು.

You cannot copy contents of this page