ಮಾಜಿ ಪಂ. ಸದಸ್ಯ ನಿಧನ

ಮುಳಿಯಾರು: ಪಂಚಾಯತ್‌ನ ಮಾಜಿ ಸದಸ್ಯ, ಅಮ್ಮಂಗೋಡು ಗೋಳಿಯಡ್ಕ ನಿವಾಸಿ ಸುಂದರ (54) ನಿಧನ ಹೊಂದಿದರು. ದಲಿತ್ ಲೀಗ್ ಪದಾಧಿಕಾರಿಯಾಗಿದ್ದರು.  ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿದ್ದ ಇವರು ಅಸೌಖ್ಯ ನಿಮಿತ್ತ    ವಿಆರ್‌ಎಸ್ ಪಡೆದಿದ್ದರು.  ಮನೆಯಲ್ಲಿ ವಿಶ್ರಾಂತಿಯ ಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ ನಿಧನಹೊಂದಿದ್ದಾರೆ.

ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಸುಚಿತ್ರ, ಸಂಧ್ಯಾ, ಸುಪ್ರಿಯ, ಅಳಿಯಂದಿರಾದ ಸನೋಜ್, ಆಲ್ವಿನ್, ಸಹೋದರ ರಾಘವನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರರಾದ ಸೀತಾರಾಮ, ಬಾಬು, ಸಹೋದರಿ ಅಮ್ಮಾಳು, ತಂದೆ ಕುಂಞ, ತಾಯಿ ಎಂಕಿಟ್ಟಿ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page