ಕೂಡ್ಲುನಲ್ಲಿ ಕೆಸರುಗದ್ದೆ ಗ್ರಾಮೋತ್ಸವ

ಕಾಸರಗೋಡು: ಕೇಳುಗುಡ್ಡೆ, ಗುಡ್ಡೆ ದೇವಸ್ಥಾನ, ಗಂಗೆ, ಕೂಡ್ಲು ಎಂಬೀ ಪ್ರದೇಶಗಳ ಕ್ರೀಡಾ ಪ್ರೇಮಿಗಳಿಗಾಗಿ ಗಂಗೆ ಗದ್ದೆಯಲ್ಲಿ ಗ್ರಾಮೋತ್ಸವ ನಡೆಸ ಲಾಯಿತು. ಅಯ್ಯಪ್ಪ ಮಂದಿರ ಅರ್ಚಕ ಸತ್ಯನಾರಾಯಣ ಅಡಿಗ ಉದ್ಘಾಟಿ ಸಿದರು. ಮಧೂರು ಪಂ. ಸದಸ್ಯೆ ಸೌಮ್ಯ ಅಧ್ಯಕ್ಷತೆ ವಹಿಸಿದರು. ಮಂದಿರದ ಗುರುಸ್ವಾಮಿಗಳಾದ ಶ್ರೀಧರ, ವಸಂತ, ರವಿಚಂದ್ರ ಭಾಗವಹಿಸಿದರು. ಕೆಸರುಗದ್ದೆಯಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಸಂಜೆ ಸಮಾರೋಪ ಸಮಾರಂಭ ಜರಗಿದ್ದು, ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಡಾ. ಎಚ್. ಅರ್ಚನ ಬಹುಮಾನ ವಿತರಿಸಿದರು. ರಾಧಾಕೃಷ್ಣ ಸೂರ್ಲು, ಜಯಚಂದ್ರ, ರವೀಂದ್ರ, ಎ.ಟಿ. ನಾಯ್ಕ್, ಅನೀಶ್ ರೈ, ಕೆ.ಆರ್. ಹರೀಶ್ ಭಾಗವಹಿಸಿದರು.

You cannot copy contents of this page