ಮಧ್ಯವಯಸ್ಕ ಮನೆಯೊಳಗೆ ನೇಣುಬಿಗಿದು ಸಾವು

ಕಾಸರಗೋಡು: ಮಧ್ಯವಯ ಸ್ಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ.

ಬೇಡಗಂ ವೇಳಾಯಿಯ ಎಂ. ಅಶೋಕನ್ (58) ಮೃತ ವ್ಯಕ್ತಿ. ನಿನ್ನೆ ರಾತ್ರಿ 7 ಗಂಟೆ ವೇಳೆ ಮನೆಯೊಳಗೆ ನೇಣು ಬಿಗಿದ   ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕೆಳಗಿಳಿಸಿ ಬೇಡಡ್ಕ ತಾಲೂಕು ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ದಿ| ಕೋಮನ್ ನಾಯರ್-ಅಮ್ಮಾಳು ಅಮ್ಮ ದಂಪತಿಯ ಪುತ್ರನಾದ ಮೃತರ ಪತ್ನಿ ಇಂದಿರ ಈ ಹಿಂದೆ ನಿಧನಹೊಂದಿದ್ದಾರೆ.

ಮೃತರು ಮಕ್ಕಳಾದ ಅಶ್ವಿನ್, ಆದಿರ, ಸಹೋದರ-ಸಹೋದರಿಯರಾದ ಪವಿತ್ರನ್, ಕಾರ್ತ್ಯಾಯಿನಿ, ರತ್ನಾವತಿ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page