ಮಸೀದಿ ಕಚೇರಿಯೊಳಗೆ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಯುವಕನೋರ್ವ ಮಸೀದಿಯ ಕಚೇರಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೊಗ್ರಾಲ್ ಕೆ.ಕೆ. ಪುರದ ಅಬ್ದುಲ್ ಘನಿ ಸಿದ್ಧಿಕ್ರ ಪುತ್ರ ಅಬ್ದುಲ್ ವಫ ಸಿದ್ದಿಕ್ (21) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ಮಧ್ಯಾಹ್ನ ವೇಳೆ ಈತ ಮೊಗ್ರಾಲ್ ಕಡವತ್ನ ಅಹಮ್ಮದೀಯ ಮಸೀದಿಯ ಕಚೇರಿ ಕೊಠಡಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೊಗ್ರಾಲ್ ಕಡವತ್ನ ಅಹಮ್ಮದೀಯ ಮಸೀದಿಯ ಪರಿಸ ರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತರು ತಂದೆ, ತಾಯಿ ತಾಹಿರ, ಸಹೋದರಿ ಅಮ್ತುನ್ನೂರ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.