ಪ್ರಿಯತಮೆಯನ್ನು ಕಾಣಲು ತಲುಪಿದ ಪ್ರಿಯತಮನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ: ಮಾಹಿತಿ ತಿಳಿದ ಪ್ರಿಯತಮೆ ವಿಷ ಸೇವಿಸಿ ಆಸ್ಪತ್ರೆಯಲ್ಲಿ
ಮುಳ್ಳೇರಿಯ: ಪ್ರಿಯತಮೆ ಯನ್ನು ಭೇಟಿಯಾಗಲು ತಲುಪಿದ ಯುವಕನನ್ನು ಅಪಹರಿಸಿಕೊಂಡು ಹೋಗಿ ಹಲ್ಲೆಗೈದ ಬಗ್ಗೆ ತಿಳಿದು ಬಂದಿದೆ. ಇದನ್ನು ತಿಳಿದ ಪ್ರಿಯ ತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾಳೆ. ನಿನ್ನೆ ಆದೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣದಲ್ಲಿ ಯುವತಿಯ ಸಹೋದರರು ಸಹಿತ 17 ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಯುವತಿ ಹಾಗೂ ಯುವಕ ಹತ್ತಿರದ ಸಂಬಂಧಿಕರಾಗಿದ್ದಾರೆ. ಇವರಿಬ್ಬರೂ ಪ್ಲಸ್‌ಟುನಲ್ಲಿ ಜೊತೆಯಾಗಿ ಕಲಿತಿದ್ದಾರೆ. ನಿನ್ನೆ ಯುವಕ ಯುವತಿಯ ಮನೆಗೆ ತಲುಪಿದ್ದನು. ಈ ಸಮಯದಲ್ಲಿ ಯುವತಿಯ ತಾಯಿ ಮಾತ್ರವೇ ಮನೆಯಲ್ಲಿ ಇದ್ದುದಾಗಿ ಹೇಳಲಾಗುತ್ತಿದೆ. ಆದರೆ ಯುವಕ ತಲುಪಿದ ವಿಷಯ ತಾಯಿಗೆ ತಿಳಿದಿರಲಿಲ್ಲವೆನ್ನಲಾಗಿದೆ. ಬಳಿಕ ಮನೆಗೆ ತಲುಪಿದ ಸಹೋದರ ಸಹೋದರಿಯ ಪ್ರಿಯತಮ ಮನೆಯೊಳಗಿರುವುದಾಗಿ ಪತ್ತೆಹಚ್ಚಿದ್ದರು.
ಬಳಿಕ ಇನ್ನೋರ್ವ ಸಹೋದರ ಹಾಗೂ ಗೆಳೆಯನನ್ನು ಬರಹೇಳಿ ಪ್ರಿಯತಮನಾದ ಯುವಕನನ್ನು ಹಲ್ಲೆಗೈದು ಕಾರಿನಲ್ಲಿ ಕೊಂಡುಹೋಗಿ ಬೆಳ್ಳೂರಡ್ಕಕ್ಕೆ ತಲುಪಿಸಿ ಹಲ್ಲೆಗೈದಿ ರುವುದಾಗಿಯೂ ಹೇಳಲಾಗುತ್ತಿದೆ. ಅಲ್ಲದೆ ಮನೆಗೆ ಕಿಚ್ಚಿರಿಸುವುದಾಗಿ ಬೆದರಿಕೆ ಒಡ್ಡಿದ ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಯುವಕನ ಪ್ರಿಯತಮೆಯಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ.