ಚೆರ್ಕಳ- ಚಟ್ಟಂಚಾಲ್ ಹೆದ್ದಾರಿಯಲ್ಲಿ ಸಂಚಾರ ನಿಷೇಧ

ಚೆರ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆರ್ಕಳ- ಚಟ್ಟಂಚಾಲ್ ರಸ್ತೆಯಲ್ಲಿ ಮತ್ತೆ ಬಸ್ ಸಹಿತ ವಾಹನ ಸಂಚಾರ ನಿಷೇಧಿಸಲಾಗಿದೆ. ಕೇಂದ್ರ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಆಗಸ್ಟ್ 21ರಿಂದ ಬಿರುಸಿನ ಮಳೆಗೆ ಸಾಧ್ಯತೆ ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಇನ್ನೊಂದು ಸೂಚನೆ ಲಭಿಸುವವರೆಗೂ  ರೂಟ್‌ನಲ್ಲಿ ವಾಹನ ಸಂಚಾರಕ್ಕೆ ನಿಷೇಧವಿರುತ್ತದೆ ಎಂದು ಅಡೀಶನಲ್ ಜಿಲ್ಲಾ ಮೆಜಿಸ್ಟ್ರೇಟ್ ತಿಳಿಸಿದ್ದಾರೆ.

You cannot copy contents of this page