ಬಂದ್ಯೋಡು ಆಸ್ಪತ್ರೆಯ ದಾದಿ ಸಾವು : ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಲ್ಲಿಕೋಟೆಗೆ
ಕುಂಬಳೆ: ಬಂದ್ಯೋಡು ಖಾಸಗಿ ಆಸ್ಪತ್ರೆಯ ನರ್ಸಿಂಗ್ ಟ್ರೈನಿಯಾದ ಯುವತಿ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇ ಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಕೊಲ್ಲಂ ತೆನ್ಮಲ ಉರುಕ್ಕುಳಂ ಸ್ಮೃತಿ ಭವನದ ಎಸ್.ಕೆ. ಸ್ಮೃತಿ (20) ಸೋಮವಾರ ಮಧ್ಯಾಹ್ನ ವೇಳೆ ಬಂದ್ಯೋಡಿ ನಲ್ಲಿರುವ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಟ್ರೈನಿಯಾಗಿ ಕಳೆದ ಮೂರು ತಿಂಗಳಿಂದ ಸ್ಮೃತಿ ಕೆಲಸ ನಿರ್ವಹಿಸಿದ್ದರು. ಆದಿತ್ಯವಾರ ರಾತ್ರಿ ಕೆಲಸ ಮುಗಿಸಿ ಸೋಮವಾರ ಬೆಳಿಗ್ಗೆ ಇವರು ಹಾಸ್ಟೆಲ್ಗೆ ತಲುಪಿ ದ್ದರು. ಅವರ ಜೊತೆ ಕೆಲಸ ನಿರ್ವ ಹಿಸುವ ಇತರರು ಸಮೀಪದ ಕೊಠ ಡಿಯಲ್ಲಿ ವಾಸಿಸುತ್ತಿದ್ದರು. ಹಾಸ್ಟೆಲ್ನ ಒಂದನೇ ಮಹಡಿಯ ಕೊಠಡಿಯಲ್ಲಿ ಮಂಚದ ಮೇಲಿನ ಕಬ್ಬಿಣದ ಸರಳಿಗೆ ಶಾಲು ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದಿತ್ಯವಾರ ಆಸ್ಪತ್ರೆಗೆ ತಲುಪಿದ ರೋಗಿಗೆ ಪಾರಾಸಿಟಮಾಲ್ ಮಾತ್ರೆ ಹಾಗೂ ಚುಚ್ಚು ಮದ್ದು ನೀಡಲು ವೈದ್ಯರು ನಿರ್ದೇಶಿಸಿದ್ದರೆನ್ನಲಾಗಿದೆ. ಆದರೆ ಒಂದನ್ನು ಮಾತ್ರ ನೀಡಿದ ಹಿನ್ನೆಲೆಯಲ್ಲಿ ಅಲ್ಲಿ ಅಲ್ಪ ಸಮಸ್ಯೆ ಸೃಷ್ಟಿಯಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಅನಂತರ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಪ್ರತ್ಯೇಕ ಅವಲೋಕನ ಸಭೆ ಸೇರಿದ್ದು, ಸಭೆಯಲ್ಲಿ ದಾದಿಯನ್ನು ತೀವ್ರವಾಗಿ ವಿಮರ್ಶಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ದಾದಿಯ ಸಾವಿನಲ್ಲಿ ಸಂಶಯ ವಿದೆಯೆಂದು ಮನೆಯವರು ತಿಳಿಸಿದ್ದಾರೆ. ಪುತ್ರಿಯನ್ನು ಕೊಲೆಗೈದು ನೇತುಹಾಕಿರುವುದಾಗಿ ತಂದೆ ಕೋಮಳರಾಜನ್ ಆರೋಪಿಸಿದ್ದಾರೆ. ಯುವತಿಯ ಸಾವಿನಲ್ಲಿ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಅಸಹಜ ಸಾವು ಕೇಸು ದಾಖಲಿಸಿಕೊಂಡಿದ್ದಾರೆ.