ಕಾಲೇಜು ಯೂನಿಯನ್ ಚುನಾವಣೆ: ಐದು ಕಾಲೇಜುಗಳು ಎಸ್ಎಫ್ಐ ಬಗಲಿಗೆ ; ಉಳಿದೆಡೆ ಯುಡಿಎಸ್ಎಫ್-ಎಸ್ಎಫ್ಐ ಬಲಾಬಲ
ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ಹಾಗೂ ಯುಡಿಎಸ್ಎಫ್ ಉತ್ತಮ ಸಾಧನೆ ಮೆರೆದಿದೆ.
ಎಳೇರಿತಟ್ಟ್ ಇ.ಕೆ.ಎನ್.ಎಂ ಸರಕಾರಿ ಕಾಲೇಜು ಐಎಚ್ಆರ್ಡಿ ಪಳ್ಳಿಕೆರೆ, ಐಎಚ್ಆರ್ಡಿ ಮಡಿಕೈ, ಕರಿಂದಳಂ ಸರಕಾರಿ ಕಾಲೇಜು ಮತ್ತು ಎಸ್ಎನ್ಡಿಪಿ ಕಾಲಿಚ್ಚಾನಡ್ಕ ಎಂಬೀ ಕಾಲೇಜುಗಳಲ್ಲಿ ಎಸ್ಎಫ್ಐ ಅವಿರೋಧವಾಗಿ ಆಯ್ಕೆಗೊಂಡಿದೆ.
ಇನ್ನು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಸ್ಎಫ್ಐ ಮತ್ತು ಯುಡಿಎಸ್ಎಫ್ ಸಮಾನವಾದ ರೀತಿಯ ಬಲಾಬಲ ಪ್ರದರ್ಶಿಸಿದೆ. ಈ ಕಾಲೇಜಿನ 9 ಮೈನರ್ ಸ್ಥಾನಗಳ ಪೈಕಿ ಯುಡಿಎಸ್ಎಫ್ ಹಾಗೂ ಎಂಟರಲ್ಲಿ ಎಸ್ಎಸ್ಐ ಗೆಲುವು ಸಾಧಿಸಿದೆ. ಎಬಿವಿಪಿಗೆ ಒಂದು ಸ್ಥಾನ ಲಭಿಸಿದೆ. ಒಂದು ಸ್ಥಾನದ ಮತ ಎಣಿಕೆಯನ್ನು ಇಂದಿಗೆ ಮುಂದೂಡಲಾಗಿದೆ. ಇದರ ಫಲಿತಾಂಶ ಎಸ್ಎಫ್ಐ ಮತ್ತು ಯುಡಿಎಸ್ಎಫ್ಗೆ ನಿರ್ಣಾಯಕ ವಾಗಲಿದೆ. ರಾಜಪುರ ಸೈಂಟ್ ಪಾಯಸ್ ಕಾಲೇಜಿನಲ್ಲಿ ಒಂದು ಸೀಟನ್ನು ಹೊರತು ಪಡಿಸಿ ಉಳಿದ ಎಲ್ಲಾ ಸೀಟು ಗಳನ್ನು ಎಸ್ಎಫ್ಐ ಗೆದ್ದುಕೊಂಡಿದೆ. ಮುನ್ನಾಡು ಪೀಪಲ್ಸ್ ಕಾಲೇಜು ಮತ್ತು ಕಾಞಂಗಾಡ್ ನೆಹರೂ ಕಾಲೇಜುಗಳಲ್ಲಿ ಯುಡಿಎಸ್ಎಫ್ ಪಾರಮ್ಯ ಮೆರೆದಿದೆ. ಮುಳ್ಳೇರಿಯ, ಬೆಚ್ಚ ಕಾಲೇಜು ಮತ್ತು ಪೆರಿಯ ಎಸ್ಎನ್ ಕಾಲೇಜಿನ ಚುನಾವಣೆ ಮುಂದೂಡಲಾಗಿದೆ.