ವರ್ಕಾಡಿ ಪಂ. ಮಿನಿ ಸ್ಟೇಡಿಯಂ ನಿರ್ಮಾಣ ಕಾಮಗಾರಿಗೆ ಸಚಿವರಿಂದ ಶಂಕು ಸ್ಥಾಪನೆ
ವರ್ಕಾಡಿ: ವರ್ಕಾಡಿ ಪಂಚಾಯತ್‌ನ ಮಿನಿ ಸ್ಟೇಡಿಯಂನ ನಿರ್ಮಾಣ ಕಾಮಗಾರಿಯನ್ನು ರಾಜ್ಯ ಕ್ರೀಡಾ ಸಚಿವ ವಿ. ಅಬ್ದುರಹ್ಮಾನ್ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಸ್ಪೋರ್ಟ್ಸ್ ಕೇರಳ ಫೌಂಡೇಶನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಪಿಎಂ ಮೊಹಮ್ಮದ್ ಅಶ್ರಫ್ ವರದಿ ಮಂಡಿಸಿದರು. ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಕ್ರೀಡಾ ಇಲಾಖೆಯ ಟಿ. ಅನೀಶ್ ಮುಖ್ಯ ಅತಿಥಿಯಾಗಿದ್ದರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಜಿಲ್ಲಾ ಪಂ. ಸದಸ್ಯೆ ಕಮಲಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾ ವಿ.ಆರ್. ಸಾಮಾನಿ, ರಾಜ್‌ಕುಮಾರ್ ಶೆಟ್ಟಿ, ಮಮತಾ ಶೆಟ್ಟಿ, ಮಂಜೇಶ್ವರ ಬ್ಲೋಕ್ ಪಂ. ಸದಸ್ಯ ಮೊಯ್ದೀನ್ ಕುಂಞಿ ತಲೆಕ್ಕಿ, ಪಂಚಾಯತ್ ಸದಸ್ಯರಾದ ಇಬ್ರಾಹಿಂ, ಖಮರುನ್ನೀಸ, ಶಿವರಾಜ್‌ಕುಮಾರ್, ಅಬ್ದುಲ್ ಲತೀಫ್, ಪದ್ಮಾವತಿ, ಉಮ್ಮರ್ ಬೋರ್ಕಳ, ಆಶಾಲತಾ, ಮಾಲತಿ, ಬಿ. ರಮೇಶ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಬಿ. ಬೂಬ, ಬಿ.ಎಂ.ಕೆ. ಮೊಹಮ್ಮದ್, ಕೆ. ಮೊಹಮ್ಮದ್, ಜಯಪ್ರಕಾಶ್ ಡಿಸೋಜ, ಟಿ. ಧೂಮಪ್ಪ ಶೆಟ್ಟಿ, ಅಶ್ರಫ್ ಬಡಾಜೆ, ಮೊಹಮ್ಮದ್ ಮಜಲ್, ಸಿಡಿಎಸ್ ಚೆಯರ್ ಪರ್ಸನ್ ವಿಜಯಲಕ್ಷ್ಮಿ ಮಾತನಾಡಿದರು. ಪಂಚಾಯತ್ ಅಧ್ಯಕ್ಷೆ ಎಸ್. ಭಾರತಿ ಸ್ವಾಗತಿಸಿ, ಕಾರ್ಯದರ್ಶಿ ಜಿ. ಅನಿಲ್ ಕುಮಾರ್ ವಂದಿಸಿದರು.