ಹಣವಿಲ್ಲ: ವಾರ್ಷಿಕ ಯೋಜನೆಗಳಿಗೆ ಮೊತ್ತದಲ್ಲಿ ಶೇ. 50ರಷ್ಟು ಕತ್ತರಿ

ತಿರುವನಂತಪುರ: ರಾಜ್ಯ ಸರಕಾರ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಶಮನಗೊಳ್ಳದೆ ಇನ್ನೂ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಯೋಜನೆಗಳ ಮೊತ್ತಗಳಿಗೆ ಶೇ. ೫೦ರಷ್ಟು ಕತ್ತರಿ ಹಾಕಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಮಾತ್ರವಲ್ಲ ಅನಿವಾರ್ಯದ ಅಭಿವೃದ್ಧಿ ಯೋಜನೆಗಳನ್ನು ಸದ್ಯ ಹೊರತುಪಡಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ. ಈ ಹಿಂದಿನ ಮೂರು ವರ್ಷಗಳ ಆರ್ಥಿಕ ಬಿಕ್ಕಟ್ಟುಗಳನ್ನು ಗಣನೆಗೆ ತೆಗೆದುಕೊಂಡು ಖರ್ಚುಗಳನ್ನು ಮುಂದೂಡುವ ಅಥವಾ ಅದರಲ್ಲಿ ಶೇ. ೨೫ರಿಂದ ಶೇ. ೩೦ರತನಕ ಕಡಿತಹೇರುವ ಕ್ರಮಗಳನ್ನು ಈ ತನಕ ಅನುಸರಿಸಲಾಗುತ್ತಿತ್ತು. ಆದರೆ ವಾರ್ಷಿಕ ಯೋಜನೆಯ ಒಟ್ಟು ಮೊತ್ತಕ್ಕೆ ಶೇ. ೫೦ರಷ್ಟು ಕತ್ತರಿ ಹಾಕುವ ಸರಕಾರದ ಈಗಿನ ತೀರ್ಮಾನ ರಾಜ್ಯದಲ್ಲಿ ಇದೇ ಮೊದಲ ಬಾರಿಯಾಗಿದೆ. ಹೀಗೆ ವಾರ್ಷಿಕ ಯೋಜನೆಗಳಿಗೆ ಕಡಿತ ಹೇರಿ ಆ ಹಣವನ್ನು ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸರಕಾರಿ ಸಿಬ್ಬಂದಿಗಳ ವಿವಿಧ ರೀತಿಯ ಸವಲತ್ತುಗಳ ವಿತರಿಸುವ ಯತ್ನದಲ್ಲಿ ಸರಕಾರ ತೊಡಗಿದೆ.

Leave a Reply

Your email address will not be published. Required fields are marked *

You cannot copy content of this page