ದೈವ ಕಲಾವಿದ ನಾಪತ್ತೆ
ಕುಂಬಳೆ: ಮೊಗ್ರಾಲ್ ಪೇರಾಲ್ ನಿವಾಸಿ ದೈವಕಲಾವಿದ ನಾದ ಶ್ರೀಧರ (51) ಎಂಬವರು ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಸಂಬಂಧಿಕರು ನೀಡಿದ ದೂರಿನಂತೆ ಕುಂಬಳೆ ಪೊಲೀ ಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸೆ. 11ರಂದು ಮನೆಯಿಂದ ಹೋದ ಇವರು ಬಳಿಕ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇವರು ಕುಟುಂಬ ಸಮೇತ ಮೊಗ್ರಾಲ್‌ನ ತರವಾಡು ಮನೆಯಲ್ಲಿ ವಾಸಿಸುತ್ತಿದ್ದರು.