ಹಳಿಯಲ್ಲಿ ಸಿಲುಕಿದ ಸರಕು ರೈಲು: ಗಂಟೆಗಳ ತನಕ ಅಸ್ತವ್ಯಸ್ಥಗೊಂಡ ಸಾರಿಗೆ ಸಂಚಾರ
ಕಾಸರಗೋಡು: ಕೋಟಿಕುಳಂ ರೈಲು ನಿಲ್ದಾಣದಲ್ಲಿ ಸರಕು ಹೇರಿ ಬಂದ ರೈಲುಗಾಡಿ ಹಳಿಯಲ್ಲೇ ಸಿಲುಕಿಕೊಂಡು ಅದರ ಪರಿಣಾಮ ಅಲ್ಲಿನ ರೈಲ್ವೇಗೇಟ್ನ್ನು ತೆರೆಯದೆ ಸಾರಿಗೆ ಸಂಚಾರ ಗಂಟೆಗಳ ತನಕ ಅಸ್ತವ್ಯಸ್ಥಗೊಂಡ ಘಟನೆ ನಡೆದಿದೆ.
ನಿನ್ನೆ ರಾತ್ರಿ ಇಂಧನ ಹೇರಿಕೊಂಡು ಬಂದ ಸರಕು ರೈಲುಗಾಡಿ ಕೋಟಿಕುಳಂ ನಿಲ್ದಾಣಕ್ಕೆ ಆಗಮಿಸಿದ ವೇಳೆ ಅದರ ಇಂಜಿನ್ ದಿಢೀರ್ ಕೈಗೊಟ್ಟಿದೆ. ಇದರಿಂದಾಗಿ ಆ ರೈಲು ಮುಂದಕ್ಕೆ ಸಾಗಲು ಸಾಧ್ಯವಾಗದೆ ರೈಲು ನಿಲ್ದಾಣದ ಒಂದನೇ ಫ್ಲಾಟ್ ಫಾಂನಲ್ಲಿ ಮತ್ತು ಕೋಟಿಕುಳಂ ರೈಲ್ವೇ ಗೇಟಿನ ಮಧ್ಯಭಾಗದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ರೈಲ್ವೇ ಗೇಟನ್ನು ತೆರೆಯಲಿಲ್ಲ. ಇದರಿಂದಾಗಿ ವಾಹನಗಳು ಮತ್ತು ಜನರು ರೈಲ್ವೇ ಗೇಟ್ನ ಮೂಲಕ ಸಾಗಲು ಸಾಧ್ಯವಾಗದೆ ಗಂಟೆಗಳ ಕಾಲ ಅಲ್ಲೇ ಉಳಿದು ತೀವ್ರ ಸಂಕಷ್ಟಕ್ಕೆ ಸಿಲುಕಬೇಕಾಗಿ ಬಂದಿದೆ. ಮಾತ್ರವಲ್ಲ ಇದರಿಂದಾಗಿ ಇತರ ರೈಲುಗಳನ್ನು ಬೇರೆ ಹಳಿಗಳ ಮೂಲಕ ಸಾಗಬೇಕಾಗಿ ಬಂತು. ಬಳಿಕ ರೈಲ್ವೇ ಮೆಕ್ಯಾನಿಕ್ಗಳು ಸ್ಥಳಕ್ಕಾಗಮಿಸಿ ದುರಸ್ತಿ ಕೆಲಸ ನಿರ್ವಹಿಸಿದ ನಂತರ ಹಳಿಯಲ್ಲಿ ಸಿಲುಕಿಕೊಂಡ ಸರಕು ಲಾರಿ ಸಂಚಾರ ಮುಂದುವರಿಸಿತು.