ಇಂಡಿಯ ಒಕ್ಕೂಟ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವ-ಕೆ. ಸುರೇಂದ್ರನ್

ಹೊಸಂಗಡಿ: ಕೇಂದ್ರ ಸರ್ವಸ್ಪರ್ಶಿ ಆಡಳಿತ ನೀಡುತ್ತಿರುವಾಗ ಇಂಡಿಯ ಒಕ್ಕೂಟದ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನುಡಿದರು. ಮಂಜೇಶ್ವರ ಮಂಡಲ ಸದಸ್ಯತ್ವ ಅಭಿಯಾನ, ಪಂಡಿತ್ ದೀನ್‌ದಯಾಳ್ ಜನ್ಮ ಜಯಂತಿ ಕಾರ್ಯಕ್ರಮ ವರ್ಕಾಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದೆಹಲಿ, ಕರ್ನಾಟಕ, ತಮಿಳ್ನಾಡು, ಕೇರಳದಲ್ಲಿ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಓಲೈಕೆ ರಾಜಕಾರಣ ನಡೆಯುತ್ತಿದೆ. ಪ್ರಳಯ ಉಂಟಾದರೂ, ಪ್ರಾಕೃತಿಕ ವಿಕೋಪ ಉಂಟಾದರೂ ರಾಜ್ಯ ಸರಕಾರ ಅದರ ಹೆಸರಲ್ಲಿ ಲಾಭ ಮಾಡಲು ನೋಡುತ್ತಿದೆಯೆಂದವರು ಆರೋಪಿಸಿದರು.

ಕೇಂದ್ರ ಜ್ಯಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಯೋಜನೆ ಸಮಗ್ರ ಜ್ಯಾರಿ ಮಾಡದೆ ರಾಜ್ಯ ಸರಕಾರ ಬಡವರನ್ನು ವಂಚಿಸುತ್ತಿದೆ ಎಂದವರು ಆರೋಪಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ರೈ, ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಸತೀಶ್ಚಂದ್ರ ಭಂಡಾರಿ, ಹರಿಶ್ಚಂದ್ರ ಎಂ., ದೂಮಪ್ಪ ಶೆಟ್ಟಿ, ಪದ್ಮಾವತಿ, ತುಳಸಿ ಕುಮಾರಿ, ಗೋಪಾಲ ಶೆಟ್ಟಿ, ಲೋಕೇಶ್ ನೋಂಡ, ಯಾದವ ಬಡಾಜೆ, ರಕ್ಷಣಾ ಅಡೆಕ್ಕಳ, ರವಿರಾಜ್, ಯತಿರಾಜ್ ಶೆಟ್ಟಿ, ಭಾಸ್ಕರ ಪೊಯ್ಯೆ, ಚಂದ್ರಹಾಸ ಪೂಜಾರಿ ಭಾಗವಹಿಸಿದರು.

RELATED NEWS

You cannot copy contents of this page