ಸಿಪಿಎಂ-ಪಿ.ವಿ. ಅನ್ವರ್ ಜಟಾಪಟಿ ತಾರಕಕ್ಕೆ: ನಾನು ಮನಸ್ಸು ಮಾಡಿದಲ್ಲಿ ಎಡರಂಗಕ್ಕೆ 25 ಪಂ.ಗಳ ಆಡಳಿತ ನಷ್ಟಗೊಳ್ಳಲಿದೆ-ಅನ್ವರ್ ಬೆದರಿಕೆ
ತಿರುವನಂತಪುರ: ಸಿಪಿಎಂ ಮತ್ತು ಸಿಪಿಎಂ ಬೆಂಬಲಿತ ಪಕ್ಷೇತರ ಶಾಸಕ ಪಿ.ವಿ. ಅನ್ವರ್ ನಡುವಿನ ರಾಜಕೀಯ ಜಟಾಪಟಿ ದಿನೇ ದಿನೇ ತಾರಕಕ್ಕೇರ ತೊಡಗಿದ್ದು, ಇದೇ ವೇಳೆ ನಾನು ಮನಸ್ಸು ಮಾಡಿದಲ್ಲಿ 25 ಗ್ರಾಮ ಪಂಚಾಯತ್ಗಳ ಆಡಳಿತ ಎಡರಂಗಕ್ಕೆ ನಷ್ಟಗೊಳ್ಳಲಿದೆಯೆಂದು ಅನ್ವರ್ ಸಿಪಿಎಂಗೆ ಬೆದರಿಕೆಯೊಡ್ಡಿದ್ದಾರೆ. ಮಲಪ್ಪುರಂ, ಕಲ್ಲಿಕೋಟೆ ಹಾಗೂ ಪಾಲ್ಘಾಟ್ ಜಿಲ್ಲೆಗಳ ಹೆಚ್ಚಿನ ಗ್ರಾಮ ಪಂಚಾಯತ್ಗಳ ಆಡಳಿತ ಸಿಪಿಎಂಗೆ ನಷ್ಟಗೊಳ್ಳಲಿದೆ. ಇದನ್ನು ಎದುರಿಸುವ ಸಾಮರ್ಥ್ಯ ಎಡರಂಗಕ್ಕಿದೆಯೇ ಎಂದು ಅನ್ವರ್ ಸವಾಲು ಎಸೆದಿದ್ದಾರೆ. ಈ ಮೂಲಕ ಸಿಪಿಎಂ ವಿರುದ್ಧ ತನ್ನ ನಿಲುವನ್ನು ಅನ್ವರ್ ಇನ್ನಷ್ಟು ಬಿಗಿಗೊಳಿಸಿದ್ದಾರೆ. ಅನ್ವರ್ ನಿನ್ನೆ ನಿಲಾಂಬೂರ್ನಲ್ಲಿ ಸಾರ್ವಜನಿಕ ಸಭೆ ನಡೆಸಿದ್ದು, ಅದರಲ್ಲಿ ನಿರೀಕ್ಷೆಗೂ ಹೆಚ್ಚಿನ ಸಂಖ್ಯೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದು, ಅದು ಎಡರಂಗವನ್ನು ದಂಗುಬಡಿಸಿದೆ. ನನ್ನನ್ನು ಓರ್ವ ಕೋಮುವಾದಿ ಯನ್ನಾಗಿ ಚಿತ್ರೀಕರಿಸಿಲು ಸಿಪಿಎಂ ಯತ್ನಿಸುತ್ತಿದೆ. ನನ್ನ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ರೂಪು ನೀಡಲು ಚಿಂತನೆ ನಡೆಸಿದ್ದೇನೆ. ಆದರೆ ಮೊದಲು ಆಬಗ್ಗೆ ಸಮೀಕ್ಷೆ ನಡೆಸಿ ಹೊಸ ಪಕ್ಷ ರೂಪೀಕರಿಸುವ ಬಗ್ಗೆ ಆಲೋಚಿಸಲಾ ಗುವುದೆಂದು ಅವರು ಹೇಳಿದ್ದಾರೆ.
ಶೀಘ್ರ ಆರಂಭಗೊಳ್ಳಲಿರುವ ವಿಧಾನಸಭಾ ಅಧಿವೇಶನದ ಮೊದಲ ಎರಡು ದಿನಗಳು ನಾನು ಭಾಗವಹಿ ಸುವುದಿಲ್ಲ. ಇನ್ನಷ್ಟು ಸಾರ್ವಜನಿಕ ಸಭೆ ನಡೆಸಿದ ನಾನು ವಿಧಾನಸಭೆ ಪ್ರವೇ ಶಿಸುವುದಾಗಿ ಅವರು ಹೇಳಿದ್ದಾರೆ.
ಅನ್ವರ್ರ ವರ್ತನೆ ಹಿಂದೆ ಗೂಢಾಲೋಚನೆ-ಎ.ಕೆ. ಬಾಲನ್
ದಿಲ್ಲಿ: ಶಾಸಕ ಪಿ.ವಿ. ಅನ್ವರ್ ಬೆಂಕಿ ಕೊಳ್ಳಿಯಿಂದ ತಲೆ ತುರಿಸುತ್ತಿ ದ್ದಾರೆಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಎ.ಕೆ. ಬಾಲನ್ ತಿಳಿಸಿದ್ದಾರೆ. ಅನ್ವರ್ ಹೊರಿಸಿದ ನಾಲ್ಕು ಆರೋ ಪಗಳ ಕುರಿತು ತನಿಖೆ ನಡೆಯುತ್ತಿದೆ. ಅದರ ವರದಿ ಶೀಘ್ರ ಬರಲಿದ್ದು, ಅದುವರೆಗೆ ಅನ್ವರ್ಗೆ ಕಾದು ನಿಲ್ಲಬಹುದಿತ್ತಲ್ಲವೇ ಎಂದು ಎ.ಕೆ. ಬಾಲನ್ ಪ್ರಶ್ನಿಸಿದ್ದಾರೆ. ಧರ್ಮ ಹಾಗೂ ನಂಬಿಕೆಯನ್ನು ಅನ್ವರ್ ದುರುಪಯೋಗ ಮಾಡುತ್ತಿದ್ದಾರೆ. ಅನ್ವರ್ರ ವರ್ತನೆಯ ಹಿಂದೆ ಗೂಢಾ ಲೋಚನೆಯಿದೆ. ಮುಖ್ಯಮಂತ್ರಿ ಪಿಣ ರಾಯಿ ವಿಜಯನ್ ಮೇಲೆ ಜನರಿಗಿ ರುವ ನಂಬಿಕೆಯನ್ನು ಇಲ್ಲದಾಗಿಸಲು ಅನ್ವರ್ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನ ಸಫಲವಾಗದು ಎಂದು ಎ.ಕೆ. ಬಾಲನ್ ತಿಳಿಸಿದ್ದಾರೆ.