ಉಪ್ಪಳ- ಕೋಡಿಬೈಲು ರಸ್ತೆ ಶೋಚನೀಯ: ದುರಸ್ತಿಗೆ ಆಗ್ರಹ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ಉಪ್ಪಳ-ಕೋಡಿಬೈಲು ರಸ್ತೆ ಹದಗೆಟ್ಟು ಶೋಚನೀಯÁವಸ್ಥೆ ಯಿಂದ ಸಂಚಾರಕ್ಕೆ ಕಷ್ಟಕರವಾಗಿದೆ. ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೋಡಿಬೈಲು ಶಾಲೆ ಬಳಿಯಿಂದ ಮಣ್ಣಂಗುಳಿ ಮೈದಾನ ತನಕದ ರಸ್ತೆ ಅಲ್ಲಲ್ಲಿ ಡಾಮರು, ಕಾಂಕ್ರೀಟ್ ಹಾಗೂ ಇಂಟರ್‌ಲಾಕ್ ಹಾನಿಗೊಂಡು ಶೋಚನೀಯ ಸ್ಥಿತಿಯಲ್ಲಿದ್ದು, ವಾಹನ ಸಂಚಾರ ದುಸ್ತರವಾಗಿರುವುದಾಗಿ ದೂರಲಾಗಿದೆ. ಕೋಡಿಬೈಲು ಪ್ರದೇಶದಿಂದ ಉಪ್ಪಳ ಪೇಟೆ, ಪತ್ವಾಡಿ, ಮಣ್ಣಂಗುಳಿ, ಬಾಯಾರು- ಕೈಕಂಬ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಅಲ್ಲದೆ ನೂರಾರು ಮನೆಗಳು ಇದ್ದು, ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿರುವು ದರಿಂದ ವಾಹನಗಳು ಹೊಂಡಕ್ಕೆ ಬಿದ್ದು ಸಂಚರಿಸುವುದರಿAದ ಬಿಡಿಭಾಗಗಳು ಹಾನಿಗೀಡಾಗುವ ಸಂಭವ ಉಂಟಾಗಿದೆನ್ನಲಾಗಿದೆ. ಸಂಬAಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.