ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ಗೆ 36 ಲಕ್ಷ ರೂ. ಲಾಭ
ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ 2023-24ನೇ ವರ್ಷದ ವಾರ್ಷಿಕ ಮಹಾಸಭೆ ಬ್ಯಾಂಕ್‌ನ ಅಧ್ಯಕ್ಷ ಶ್ರೀಧರ ಹೊಳ್ಳರ ಅದ್ಯಕ್ಷತೆಯಲ್ಲಿ ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ನಡೆಯಿತು. ಬ್ಯಾಂಕ್‌ನ ನಿರ್ದೇಶಕ ಅಶ್ವತ್ಥ್ ಎಂ.ಸಿ ಸ್ವಾಗತಿಸಿದರು. ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ವರದಿ ಮಂಡಿಸಿದರು. ಶ್ರೀಧರ ಹೊಳ್ಳ ಕಯÁ್ಯರು ಬ್ಯಾಂಕ್‌ನ ಪ್ರಗತಿಯ ಬಗ್ಗೆ ಸದಸ್ಯರಿಗೆ ತಿಳಿಸಿದರು. ಪ್ರಸ್ತುತ ವರ್ಷ ಬ್ಯಾಂಕ್ 120 ಕೋಟಿ ರೂ. ವ್ಯವಹಾರ ನಡೆಸಿ 36 ಲಕ್ಷ ರೂ. ಲಾಭಗಳಿಸಿದೆ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅಂದುAಞÂ ಹಾಜಿ ಸಿರಂತ್ತಡ್ಕ, ಮಾಜಿ ನಿರ್ದೇಶಕ ನಾರಾಯಣ ಬೆಳ್ಚಪ್ಪಾಡ ಪಾಂಡ್ಯಡ್ಕ, ಮಾಜಿ ಕಾರ್ಯ ದರ್ಶಿ ಚಂದ್ರಹಾಸ ಶೆಟ್ಟಿ ಕಲ್ಲೇಕ್ಕರ್‌ರಿಗೆ ಸಭೆಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾ ಯಿತು. ಬ್ಯಾಂಕ್‌ನ ನಿರ್ದೇಶಕರಾದ ಗಣಪತಿ ಭಟ್ ಕುಂಡೇರಿ, ಅಬ್ದುಲ್ ಅಜೀಜ್ ಕಲಾಯಿ, ಮಾಜಿ ನಿರ್ದೇಶಕ ತಿರುಮಲೇಶ್ವರ, ಅಬ್ದುಲ್ ರಹಿಮಾನ್ ಮಾಸ್ಟರ್, ಮಾಜಿ ಕಾರ್ಯದರ್ಶಿ ಪರಮೇಶ್ವರ ಪೈವಳಿಕೆ ಮಾತನಾ ಡಿದರು. ಐಸಿಎಂ ಕಣ್ಣೂರು ಇವರ ಪ್ರತಿನಿಧಿ ಅಭಿಲಾಷ್ ಸಹಕಾರಿ ತತ್ವಗಳ ಬಗ್ಗೆ ತರಗತಿ ನಡೆಸಿದರು. ಬ್ಯಾಂಕ್‌ನ ನಿರ್ದೇಶಕ ಅಬ್ಬು ಸಾಲಿ ಕಲಾಯಿ, ಮಾರ್ಸೆಲ್ ಡಿಸೋಜಾ, ಪ್ರಶಾಂತ್ ಕುಮಾರ್, ಆಶಾದೇವಿ, ಪುಷ್ಪಾ ಬಾಯಿ ಕಟ್ಟೆ, ಉಪಾಧ್ಯಕೆÀ್ಷ ಶಾಲಿನಿ ಕುಮಾರಿ, ಸುಂದರ ಜೋಡುಕಲ್ಲು ಭಾಗವಹಿ ಸಿದರು. ಅಶ್ವತ್ಥ್ ಎಂ.ಸಿ ನಿರೂಪಿಸಿ ದರು. ಕೇಶವ ಬಾಯಿಕಟ್ಟೆ ವಂದಿಸಿದರು.