ಅನಧಿಕೃತ ಮೀನುಗಾರಿಕೆ: ಕರ್ನಾಟಕದ ಎರಡು ಬೋಟ್ ವಶಕ್ಕೆ; 5 ಲಕ್ಷ ರೂ. ದಂಡ ವಸೂಲಿ
ಕುಂಬಳೆ: ಕೇರಳದ ವ್ಯಾಪ್ತಿಗೊಳಪಟ್ಟ ಸಮುದ್ರದ ಕುಂಬಳೆ ಪರಿಸರದಲ್ಲಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಕರಾವಳಿ ಪೊಲೀಸರು ರಾತ್ರಿ ವೇಳೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಎರಡು ಕರ್ನಾಟಕ ರಾಜ್ಯದ ಬೋಟ್‌ಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಮೀನುಗಾರಿಕಾ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಪಿ.ವಿ. ಪ್ರೀತಾರ ನೇತೃತ್ವದಲ್ಲಿ ಮರೈನ್ ಎನ್‌ಫೋರ್ಸ್‌ಮೆಂಟ್, ಕುಂಬಳೆ, ಬೇಕಲ ಮತ್ತು ತೃಕ್ಕರಿಪುರ ಕರಾವಳಿ ಪೊಲೀಸ್ ಠಾಣೆಗಳ ಪೊಲೀಸ್‌ರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ದುರ್ಗಾಂಜನೇಯ ಮತ್ತು ಸಮುದ್ರತನಯ ಎಂಬಿ ಎರಡು ಮೀನುಗಾರಿಕಾ ಬೋಡ್‌ಗಳನ್ನು ಈ ರೀತಿ ವಶಪಡಿಸಲಾಗಿದೆ. ಕಾನೂನು ಪರ ದಾಖಲುಪತ್ರಗಳನ್ನು ಹೊಂದದೆ ಕೇರಳ ವ್ಯಾಪ್ತಿಗೊಳಪಟ್ಟ ಸಮುದ್ರದಲ್ಲಿ ರಾತ್ರಿ ವೇಳೆ ಟ್ರೋಲಿಂಗ್ ನಡೆಸಿದುದಕ್ಕೆ ಸಂಬಂಧಿಸಿ ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾನೂನು ಪ್ರಕಾರ ಈ ಎರಡು ಬೋಟ್‌ಗಳನ್ನು ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಈ ಎರಡು ಬೋಟ್‌ಗಳಿಗೆ ತಲಾ ೨.೫ ಲಕ್ಷ ರೂ.ನಂತೆ ಒಟ್ಟು ಐದು ಲಕ್ಷ ರೂ. ಜುಲ್ಮಾನೆ ವಿಧಿಸಲಾಗಿದೆ.