ತಂದೆಗೆ ಹಲ್ಲೆಗೈಯ್ಯುವುದನ್ನು ತಡೆಯಲೆತ್ನಿಸಿದ ಬಾಲಕಿಗೆ ಕಿರುಕುಳ: ಯುವಕ ಫೋಕ್ಸೋ ಪ್ರಕಾರ ಸೆರೆ
ಬದಿಯಡ್ಕ: ತಂದೆ ಮೇಲೆ ಹಲ್ಲೆಗೈಯ್ಯುವುದನ್ನು ಕಂಡು ತಡೆಯಲು ಯತ್ನಿಸಿದ 17ರ ಹರೆಯದ ಬಾಲಕಿಯನ್ನು ಸ್ಪರ್ಶಿಸಿ ಕಿರುಕುಳ ನೀಡಿದ ಆರೋಪದಂತೆ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಫೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಅಗಲ್ಪಾಡಿ ನಿವಾಸಿಯಾದ ಪ್ರದೀಪನ್ (37) ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. 17ರ ಹರೆಯದ ಬಾಲಕಿಯ ತಂದೆಗೆ ಪ್ರದೀಪನ್ ಹಲ್ಲೆಗೈದಿದ್ದಾನೆನ್ನಲಾಗಿದೆ. ಈ ವೇಳೆ ಅದನ್ನು ತಡೆಯಲು ಬಾಲಕಿ ಮುಂದಾದಾಗ ಪ್ರದೀಪನ್ ಆಕೆಯ ದೇಹ ಸ್ಪರ್ಧಿಸಿರುವುದಾಗಿ ದೂರಲಾ ಗಿದೆ. ಪ್ರದೀಪನ್ ವಿರುದ್ಧ ಈ ಹಿಂದೆ ಕಾಪಾ ಪ್ರಕಾರ ಕೇಸು ದಾಖಲಿಸ ಲಾಗಿತ್ತು. ಇದರಂತೆ ಈತನನ್ನು ಬಂಧಿಸಲಾಗಿತ್ತೆಂದೂ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿ ದ್ದನೆಂದು ಪೊಲೀಸರು ತಿಳಿಸಿದ್ದಾರೆ.