ಪೊಯ್ಯತ್ತಬೈಲ್ ಜಮಾಯತ್ ಸಮಿತಿಯಿಂದ ಶುಚೀಕರಣ
ಮಂಜೇಶ್ವರ: ಪೊಯ್ಯತ್ತಬೈಲು ಜಮಾಯತ್ ಸಮಿತಿ ವತಿಯಿಂದ ನಿನ್ನೆ ಸ್ವಚ್ಛತಾ ಹೀ ಸೇವಾ ಅಭಿಯಾನ ಮತ್ತು ಶುಚೀಕರಣ ಕಾರ್ಯಕ್ರಮ ನಡೆಯಿತು. ಜಮಾಯತ್ ಸಮಿತಿ ಅಧ್ಯಕ್ಷ ಡಿ.ಎಂ.ಕೆ. ಮೊಹಮ್ಮದ್ ಅಧ್ಯಕ್ಷತೆ ವಹಿಸಿದರು. ಉಸ್ತಾದ್ ಸಿರಾಜುದ್ದೀನ್ ಸಿದ್ದಿಕಿ ಉದ್ಘಾಟಿಸಿ ದರು. ಅಬ್ದುಲ್ ಕರೀಂ ಡಿ.ಕೆ, ಇಸ್ಮಾಯಿಲ್ ಟಿ, ಮೂಸಾ ಡಿ.ಕೆ ಮಾತನಾಡಿದರು. ಜಮಾಯತ್ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಪರನೀರ್, ಕೋಶಾಧಿಕಾರಿ ಮೊಹಮ್ಮದ್ ಹಾಜಿ, ಕಾರ್ಯದರ್ಶಿ ಸಿದ್ದಿಕ್ ಹಾಜಿ, ಇಬ್ರಾಹಿಂ ಹಾಜಿ ಸುಳ್ಯಮೆ, ಅಸೀಸ್, ಇಬ್ರಾಹಿಂ, ಅಹಮ್ಮದ್ ಕುಂಞಿ, ಉಮ್ಮರ್ ಪಾಲೆಂಗ್ರಿ, ಅಬ್ದುಲ್ ಜಬ್ಬಾರ್, ಜಲಾಲುದ್ದೀನ್, ಮೊಹಮ್ಮದ್ ಮಜಾಲ್ ಭಾಗವಹಿಸಿದರು.