ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ : ನಾಲ್ಕು ಮಂದಿ ವಿರುದ್ಧ ಕೇಸು
ಉಪ್ಪಳ: ತಂಡವೊಂದು ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಕಾಸರಗೋಡು ವಿದ್ಯಾನಗರ ಉಳಿಯ ಪಟ್ಲದ ಸವಾದ್ (32) ನೀಡಿದ ದೂರಿನಂತೆ ಮುಟ್ಟತ್ತೋಡಿ ಪರಿಸರ ನಿವಾಸಿಗಳಾದ ಶಫೀಕ್, ಸಾದಿಕ್, ಸಮೀಂ, ಶಹದಾಬ್ ಎಂಬಿವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ದೂರುಗಾರನಾದ ಸವಾದ್ ಉಪ್ಪಳ ಗೇಟ್‌ನಲ್ಲಿ ವ್ಯಾಪಾರಿಯಾಗಿದ್ದಾರೆ. ಅಲ್ಲಿಗೆ ನಿನ್ನೆ ಸಂಜೆ ತಲುಪಿದ ಆರೋಪಿಗಳು ಅಂಗಡಿಗೆ ನುಗ್ಗಿ ಸವಾದ್‌ಗೆ ಹಲ್ಲೆಗೈದಿದ್ದಾರೆನ್ನಲಾಗಿದೆ. ಹಣಕಾಸು ವ್ಯವಹಾರ ವಿವಾದವೇ ಹಲಗೆ ಕಾರಣವೆಂದೂ ಹೇಳಲಾಗುತ್ತಿದೆ.