ಶತಾಯುಷಿ ಕೋಡೋತ್ ತರವಾಡು ಹಿರಿಯ ನಿಧನ
ಕಾಸರಗೋಡು: ಕೋಡೋತ್ ಕುಟುಂಬದ ಹಿರಿಯರಾಗಿದ್ದ ಶತಾಯುಷಿ ಕುಯ್ಯಂಕಾಟ್ ಕುಂಞಿಕೃಷ್ಣನ್ ನಾಯರ್ (105) ನಿಧನಹೊಂದಿದರು. ಕೋಡೋತ್ ಭಗವತೀ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದರು.ಇವರ ಪತ್ನಿ ಕಾಡಗಂ ನಾರಂತ್ತಟ್ಟ ಸುಶೀಲಾ ಅಮ್ಮ ಈ ಹಿಂದೆ ನಿಧನಹೊಂದಿದರು. ಮೃತರು ಮಕ್ಕಳಾದ ಧನಂಜಯನ್, ಕೃಷ್ಣವೇಣಿ, ಸೇತುಮಾಧವನ್, ಮಧುಸೂದನನ್, ರಾಧಾಕೃಷ್ಣನ್, ನ್ಯಾಯವಾದಿ ಶ್ರೀಧರನ್, ರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.