ಶೌರ್ಯ ಘಟಕದಿಂದ ಮೃತದೇಹ ಅಂತ್ಯ ಸಂಸ್ಕಾರ

ಕಾಸರಗೋಡು: ಹೊಸ ಬಸ್ ನಿಲಾಣದಲ್ಲಿ ಇತ್ತೀಚೆಗೆ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟ ಕರ್ನಾಟಕ ನಿವಾಸಿ ಲಿಂಗಪ್ಪ ಎಂಬವರ ಮೃತದೇಹದ ಅಂತ್ಯ ಸಂಸ್ಕಾರ ಕಾಸರಗೋಡು ತಾಲೂಕು ಶೌರ್ಯ ವಿಪತ್ತು ಘಟಕದ ನೇತೃತ್ವದಲ್ಲಿ ಪಾರೆಕಟ್ಟೆ ಸ್ಮಶಾನದಲ್ಲಿ ನಡೆಸಲಾಯಿತು. ಲಿಂಗಪ್ಪರ ಮನೆ ಮಂದಿಗೆ ಮಾಹಿತಿ ತಿಳಿಸಿದಾಗ ಊರಿಗೆ ಮೃತದೇಹ ಕೊಂಡುಹೋಗಲು ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಮನೆಯವರ ಒಪ್ಪಿಗೆ ಹಾಗೂ ಪೊಲೀಸರ ಅನುಮತಿ ಪಡೆದು ಘಟಕದ ಕ್ಯಾಪ್ಟನ್ ರವೀಂದ್ರ ಅಣಂಗೂರುರವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ವೇಳೆ ಮಧೂರು ಶೌರ್ಯ ಘಟಕದ ಸಂತೋಷ್ ಉಳಿಯತ್ತಡ್ಕ, ಹರಿಪ್ರಸಾದ್ ಅಣಂಗೂರು, ರತೀಶ್ ಅಣಂಗೂರು, ಗಣೇಶ್ ಜೆ.ಪಿ. ನಗರ ಸಹಕರಿಸಿದರು.

RELATED NEWS

You cannot copy contents of this page