ಕಡಲಾಡಿಪ್ಪಾರದಲ್ಲಿ ಸ್ಫೋಟ ನಾಗರಿಕರಲ್ಲಿ ಹೆಚ್ಚಿದ ಆತಂಕ

ಕಾಸರಗೋಡು: ಕಿನಾನೂರು ಕರಿಂದಳ ಪಂಚಾಯತ್‌ನ ಕಡಲಾಡಿಪ್ಪಾರ ಎಂಬಲ್ಲಿ  ಉಂಟಾದ ಸ್ಫೋಟ ಏನೆಂಬ  ಕುರಿತು ತಿಳಿಯದ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಆತಂಕ ಇನ್ನೂ  ದೂರವಾಗಿಲ್ಲ. ಮೊನ್ನೆ ರಾತ್ರಿ 7.45ರ ವೇಳೆ ಹತ್ತರಷ್ಟು ಬಾರಿ  ಸ್ಪೋಟದ ಶಬ್ದ ಕೇಳಿ ಬಂದಿತ್ತು. ಕೆಲವೇ ನಿಮಿಷದ ಅಂತರದಲ್ಲಿ ಸ್ಫೋಟವುಂ ಟಾಗಿದ್ದು, ಇದು ನಾಗರಿಕರನ್ನು ಆತಂಕಕ್ಕೆ ಸಿಲುಕಿಸಿದೆ.  ಸಮೀಪದಲ್ಲಿ ಎಲ್ಲೂ ಉತ್ಸವ ಮತ್ತಿತರ ಕಾರ್ಯಕ್ರಮಗಳ ಸಿಡಿಮದ್ದು ಸ್ಫೋಟ ಇದಾಗಿರಬಹು ದೆಂದು ಘಟನೆ ತಕ್ಷಣ ನಾಗರಿಕರು ಭಾವಿಸಿದ್ದರು. ಆದರೆ ಅಂತಹ ಯಾವು ದೇ ಕಾರ್ಯಕ್ರಮಗಳು ನಡೆದಿಲ್ಲವೆಂದು ಬಳಿಕ ಖಾತರಿಗೊಂಡಿದೆ. ಆದ್ದರಿಂದ ಈ ಸ್ಫೋಟ ಏನೆಂಬ ಕುರಿತು ತಿಳಿಯಲಿ ರುವ ಪ್ರಯತ್ನ ಮುಂದುವರಿಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page