ಕಲ್ಲಿಕೋಟೆ: ಪಾಲಕ್ಕಾಡ್ನಿಂದ ಪತ್ತೆಹಚ್ಚಿದ ಮೊಯ್ಲೋತ್ತರ ಸರಕಾರಿ ಎಲ್ಪಿ ಶಾಲೆಯ ಅಧ್ಯಾಪಿಕೆ ಕೆ. ಅನುಮೋಳ್ ಹಾಗೂ ಸಮದ್ನನ್ನು ಪೊಲೀಸರು ಕಲ್ಲಿಕೋಟೆಗೆ ಕೊಂಡೊ ಯ್ದಿದ್ದಾರೆ. ಇವರಿಬ್ಬರನ್ನು ಕೊಯಿ ಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯ ತಪಾಸಣೆಗೊಳಪಡಿಸಲಾಗಿದೆ. ಬಳಿಕ ಅಧ್ಯಾಪಿಕೆಯನ್ನು ಕಲ್ಲಾಚಿ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದೆ. ಕುಟುಂಬದೊಂದಿಗೆ ತೆರಳಲು ಆಸಕ್ತಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಈಕೆಯನ್ನು ಹೆತ್ತವರು ಹಾಗೂ ಪತಿ ಮಕ್ಕಳೊಂದಿಗೆ ಕಳುಹಿಸಿಕೊಡಲಾ ಯಿತು. ಈಕೆಯ ಜೊತೆ ಪರಾರಿಯಾ ಗಿದ್ದ ಸಮದ್ನನ್ನು ಕೂಡಾ ವಡಗರ ನ್ಯಾಯಾಲಯ ಆತನ ಕುಟುಂಬ ದೊಂದಿಗೆ ಸಾಗಲು ಒಪ್ಪಿಗೆ ನೀಡಿದೆ.
ಮಕ್ಕಳನ್ನು ಉಪೇಕ್ಷಿಸಿರುವುದಕ್ಕೆ ಜುವೈನಲ್ ಜಸ್ಟೀಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಿದರೆ ಇವರಿಬ್ಬರು ಕೂಡಾ ಜೈಲಿಗೆ ಹೋಗಬೇಕಾಗುತ್ತಿತ್ತು. ಇದಲ್ಲದೆ ಸರಕಾರಿ ಕೆಲಸವು ಕಳೆದುಹೋಗುವ ಭಯವಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಾಪಿಕೆ ತನ್ನ ನಿಲುವು ಬದಲಿಸಿ ಕುಟುಂಬದ ಜೊತೆ ತೆರಳಲು ಸಿದ್ಧಳಾಗಿದ್ದಾಳೆನ್ನಲಾಗಿದೆ.
ಹತ್ತು ದಿನದ ಹಿಂದೆ ಶಾಲೆಗೆಂದು ತೆರಳಿದ ಅನುಮೋಳ್ ವಡಗರ ತೋಡನ್ನೂರ್ ನಿವಾಸಿ ಸಮದ್ನ ಜೊತೆ ಪರಾರಿಯಾಗಿದ್ದಳು. ಶನಿವಾರ ಪಾಲಕ್ಕಾಡ್ ಪುದುಶ್ಶೇರಿಯ ಬಾಡಿಗೆ ಮನೆಯಿಂದ ಇವರಿಬ್ಬರನ್ನು ಪತ್ತೆಹಚ್ಚಲಾಗಿದೆ. ಹತ್ತು ವರ್ಷದ ಹಿಂದೆ ಗಂಭೀರ ರೋಗ ತಗಲಿದ ಅನುಮೋಳ್ಗೆ ತನ್ನ ಕರುಳನ್ನು ನೀಡಿ ಪತಿ ಸುಭಾಷ್ ಬದುಕು ನೀಡಿದ ಹಿನ್ನಲೆಯಿರುವ ಕುಟುಂಬದಿಂದ ಈಕೆ ಅನಿರೀಕ್ಷಿತವಾಗಿ ಪರಾರಿಯಾಗಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಾಪಿಕೆ ವಿರುದ್ಧ ತೀವ್ರ ಟೀಕೆಗಳು ಮೂಡಿ ಬಂದಿತ್ತು.






