ಅದಾಲತ್‌ನಲ್ಲಿ 96 ದೂರುಗಳಿಗೆ ಪರಿಹಾರ

ಕಾಸರಗೋಡು: ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಎರಡು ದಿನಗಳಲ್ಲಾಗಿ ನಡೆದ ದೂರು ಪರಿಹಾರ ಅದಾಲತ್‌ಗೆ ಲಭಿಸಿದ ೧೨೪ ದೂರುಗಳಲ್ಲಿ 96 ದೂರುಗಳನ್ನು ಪೂರ್ಣವಾಗಿ ಪರಿಹರಿಸಲಾಯಿತು.  28ದೂರುಗಳನ್ನು ಮುಂದಿನ ಅದಾಲತ್‌ಗೆ ಮೀಸಲಿಡಲಾಗಿದೆ ಎಂದು ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ನುಡಿದರು. ಅದಾಲತ್ ನಡೆಯುತ್ತಿದ್ದ ವೇಳೆ 231 ಹೊಸ ದೂರುಗಳು ಲಭಿಸಿವೆ. ಅದಾಲತ್‌ನಲ್ಲಿ ಪರಿಗಣಿಸಿದ 17 ದೂರುಗಳು ಪೊಲೀಸ್ ಇಲಾಖೆಗಳ ಸಂಬಂಧಿಸಿದವುಗಳಾಗಿವೆ. 86 ಕಂದಾಯ ಇಲಾಖೆಗೆ 29 ಸ್ಥಳೀಯಾಡಳಿತ ಇಲಾಖೆಗೆ ಸಂಬಂಧಿಸಿದ್ದು, 24 ದೂರುಗಳು ಇತರ ಇಲಾಖೆಗೆ ಸಂಬಂಧಿಸಿದವುಗಳಾಗಿವೆ.

ದೂರುಗಳಲ್ಲಿ ತೀರ್ಪು ನೀಡುವುದರಲ್ಲಿ ನೌಕರರಿಗಿರುವ ಉದಾಸೀನ ನಿಲುವು ಕೊನೆಗೊಳಿಸಿ ಉತ್ತಮ ರೀತಿಯಲ್ಲಿ ಕಾರ್ಯಾ ಚರಿಸಬೇಕೆಂದು ಆಯೋಗ ನಿರ್ದೇಶಿಸಿದೆ. ಪೆರಿಯ ಚೆಂಗರ ಪುನರ್ವಸತಿ ಕೇಂದ್ರದ ಬಗ್ಗೆ ಲಭಿಸಿದ ದೂರಿನಲ್ಲಿ ಜಿಲ್ಲಾಧಿಕಾರಿ ಈಗಾಗಲೇ ಸ್ಥಳ ಸಂದರ್ಶಿಸಿದ್ದು, ವಿವಿಧ ಇಲಾಖೆಗಳ ಜಂಟಿ ಸಭೆಯಲ್ಲಿ ಈ ದೂರನ್ನು ಪರಿಹರಿಸಲಾಗುವುದೆಂದು ತಿಳಿಸಲಾಯಿತು. ಬಾಯಾರು ವಿಲ್ಲೇಜ್‌ನ ಕನ್ಯಾನದ ಅಣ್ಣಪ್ಪ ನಾಯ್ಕ್, ಸುಶೀಲ ಡಿಟಿಪಿಸಿ ವಹಿಸಿಕೊಂಡ ಭೂಮಿ ಆದುದರಿಂದ ತಮ್ಮ ಭೂಮಿಗೆ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲವೆಂಬ ದೂರಿನಂತೆ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಎರಡು ದಿನಗಳಲ್ಲಾಗಿ ನಡೆದ ಅದಾಲತ್‌ನಲ್ಲಿ ಆಯೋಗದ ಸದಸ್ಯರಾದ ನ್ಯಾಯವಾದಿ ಸೇತು ನಾರಾಯಣನ್, ಟಿ.ಕೆ. ವಾಸು ಎಂಬಿವರು ದೂರುಗಳನ್ನಾಲಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಆಯೋಗದ ಅದಾಲತ್ ಪೂರ್ತಿಯಾದ ಬಳಿಕ ಆಯೋಗದ ಅಧ್ಯಕ್ಷ ಶೇಖರನ್ ಮಣಿಯೋಡನ್ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page