ಕಾಸರಗೋಡು ರೈಲು ನಿಲ್ದಾಣಕ್ಕೆ ಇನ್ನು ‘ಅಮೃತ್ ಭಾರತ್’ ಮೆರುಗು

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣವನ್ನು ‘ಅಮೃತ್ ಭಾರತ್’ ರೈಲು ನಿಲ್ದಾಣವಾಗಿ ಭಡ್ತಿಗೊಳಿಸಲಾಗಿದೆ. ಈ ಯೋಜನೆಯ ನವೀಕರಣೆ ಕೆಲಸ ಮುಂದಿನ ಜನವರಿ ತಿಂಗಳೊಳಗಾಗಿ ಪೂರ್ತೀಕರಿ ಸಲಾಗುವುದು. ಕಾಸರಗೋಡು ಮಾತ್ರವಲ್ಲದೆ ದೇಶದ 1309 ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಯಾದಿಯಲ್ಲಿ ಒಳಪಡಿಸಲಾಗಿದ. ಇದರಲ್ಲಿ 508 ರೈಲು ನಿಲ್ದಾಣಗಳನ್ನು ನವೀಕರಣೆ ಕೆಲಸಗಳನ್ನು  ತ್ವರಿತ ಗತಿಯಲ್ಲಿ ನಡೆಸಲಾಗುವುದು. ಇದರಲ್ಲಿ ಕೇರಳದಲ್ಲಿ ಕಾಸರಗೋಡು ಸೇರಿದಂತೆ 30 ರೈಲು ನಿಲ್ದಾಣಗಳನ್ನು ಒಳಪಡಿಸಲಾಗಿದೆ. ಇದರಲ್ಲಿ ೧೫ ರೈಲು ನಿಲ್ದಾಣಗಳ ನವೀಕರಣೆ ಕೆಲಸಗಳನ್ನು ಜನವರಿ ತಿಂಗಳೊ ಳಗಾಗಿ ಪೂರ್ತೀಕರಿಸಲಾಗುವುದು. ಇದರಲ್ಲಿ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿರುವ ಕಾಸರಗೋಡೂ ಸೇರಿದಂತೆ 16 ರೈಲು ನಿಲ್ದಾಣಗಳು ಒಳಗೊಂಡಿದ್ದು, ಇದಕ್ಕೆ 249 ಕೋಟಿ ರೂ.ವನ್ನು ರೈಲ್ವೇ ಇಲಾಖೆ ಮಂಜೂರು ಮಾಡಿದೆ. ಈ ಯೋಜನೆಯಲ್ಲಿ ಒಳಗೊಂಡ ಕೇರಳದ ರೈಲು ನಿಲ್ದಾಣಗಳ ಹೆಸರು ಇಂತಿದೆ: ಪಯ್ಯನ್ನೂರು, ಕಣ್ಣೂರು, ಪರಪ್ಪ ನಂಙಾಡಿ, ಫಾರೋಕ್, ಅಂಙಾಡಿಪುರಂ, ವಡಗರೆ, ತಿರೂರು, ಒಟ್ಟಪಾಲಂ, ಕುಟ್ಟಿಪುರಂ, ತಲಶ್ಶೇರಿ, ಶೊರ್ನೂರು, ಮಾವೇಲಿಕ್ಕರ, ನೆಯ್ಯಾಟಿಂಗರ, ಚೆಂಗನಾಶ್ಶೇರಿ, ಅಂಗಮಾಲಿ, ಚಾಲಕ್ಕುಡಿ, ತ್ರಿಪುಣಿತ್ತರ, ಕಾಯಂಕುಳಂ, ಏಟ್ಟುಮಾನೂರು,  ಚಿರಯಿಲ್‌ಕೀಳ್, ತಿರುವಲ್ಲ, ಆಳಪ್ಪುಳ, ಗುರುವಾಯೂರು ಮತ್ತು ವಡಕ್ಕಾಂ ಚೇರಿ ಎಂಬೀ ರೈಲು ನಿಲ್ದಾಣಗಳು ಒಳಗೊಂಡಿವೆ.

ಅಮೃತ್ ಭಾರತ್ ಯೋಜನೆ ಪ್ರಕಾರ ಕಡಿಮೆ ವೆಚ್ಚದಲ್ಲಿ ರೈಲು ನಿಲ್ದಾಣಗಳನ್ನು ನವೀಕರಿಸಲಾಗುವುದು. ಅನಗತ್ಯವಾಗಿರುವ ಹಳೆ ಕಟ್ಟಡಗಳನ್ನು  ಕೆಡಹಿ ಅಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಪ್ರಯಾಣಿಕರಿಗೆ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಸಾಗಲು ಮೇಲ್ಸೇತುವೆ, ಎಕ್ಸಲೇಟರ್, ಲಿಫ್ಟ್‌ಗಳು, ಪಾರ್ಕಿಂಗ್ ಸೌಕರ್ಯ, ವಿಶ್ರಾಂತಿ ಕೊಠಡಿಗಳನ್ನು ನಿರ್ಮಿ ಸಲಾಗುವುದು. ಆಧುನಿಕ ರೀತಿಯಸಂದೇಶ ನೀಡುವ ಸಜ್ಜೀಕರಣೆ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ಸೌಕರ್ಯಗಳು, ಸಿಸಿ ಟಿವಿ ಹಾಗೂ ವೈಫೈ ಸೌಕರ್ಯಗಳನ್ನು ಏರ್ಪಡಿಸಲಾಗುವುದು. ಮಾತ್ರವಲ್ಲ ವಾಣಿಜ್ಯ ಸಮುಚ್ಛಯಗಳನ್ನು ನಿರ್ಮಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page