ಹ್ಯಾಶಿಸ್ ಆಯಿಲ್ ಸಾಗಾಟ ಪ್ರಕರಣ: ಆರೋಪಿಗೆ ಹತ್ತು ವರ್ಷ ಕಠಿಣ ಸಜೆ
ಕಾಸರಗೋಡು: ಮಾದಕದ್ರವ್ಯವಾದ ಹ್ಯಾಶಿಸ್ ಆಯಿಲ್ ಸಾಗಾಟ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯಾ ಅವರು ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಹೊಸದುರ್ಗ ಪಡನ್ನಕ್ಕಾಡ್ ಬಿಸ್ಮಿಲ್ಲಾ ಮಂಜಿಲ್‌ನ ರಿಯಾಸ್ ಎ.ಸಿ. (29) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸ ದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2022 ಸೆಪ್ಟಂಬರ್ 29ರಂದು ಬೇಕಲಕೋಟೆಗೆ ಸಮೀಪದ ರಿಸೋರ್ಟ್‌ನಲ್ಲಿ ಮಾದಕದ್ರವ್ಯ ಹಾಗೂ ಹ್ಯಾಶಿಸ್ ಆಯಿಲ್ ಸಾಗಿಸುತ್ತಿದ್ದ ಆರೋಪದಂತೆ ನಡೆಸುತ್ತಿದ್ದ ರಿಯಾಸ್‌ನನ್ನು ಅಂದು ಬೇಕಲ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಸಲಾಂ ಕೆ. ನೇತೃತ್ವದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದರು. ಬಳಿಕ ಅಂದು ಬೇಕಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಯು.ಪಿ. ವಿಪಿನ್‌ರ ಪ್ರಕರಣದ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಗವರ್ಮೆಂಟ್ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲ ಯದಲ್ಲಿ ವಾದಿಸಿದ್ದರು.