ಚಿನ್ನದ ದರ ಗಗನಕ್ಕೆ

ಕಾಸರಗೋಡು: ಚಿನ್ನದ ದರ ದಿನದಿಂದ ದಿನಕ್ಕೆ ಯಾವುದೇ ನಿಯಂತ್ರಣವಿಲ್ಲದೆ ಹೆಚ್ಚುತ್ತಿದೆ. ನಿನ್ನೆಗಿಂತ ಇಂದು ಪವನ್‌ಗೆ 480 ರೂ.ಗಳ ಹೆಚ್ಚಳವಾಗಿ 59000 ರೂ.ಗೆ ತಲುಪಿದೆ. ಇಂದು ಒಂದು ಗ್ರಾಂ ಚಿನ್ನದ ದರ 7375 ರೂ. ಆಗಿದೆ. ನಿನ್ನೆ ಇದು 7315 ರೂ. ಆಗಿತ್ತು. ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗ್ರಾಹಕರಲ್ಲಿ ತೀವ್ರ ಸಮಸ್ಯೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಷೇರು ಚಿನ್ನದ ದರ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಶೀಘ್ರದಲ್ಲೇ 60,000 ರೂ. ದಾಟಲಿದೆ ಎಂದು ಹೇಳಲಾಗುತ್ತಿದೆ.

You cannot copy contents of this page