ಸುಡುಮದ್ದು ದುರಂತ ಮೂರು ಮಂದಿ ಸೆರೆ : ಓರ್ವ ಕಸ್ಟಡಿಗೆ
ಹೊಸದುರ್ಗ: ನೀಲೇಶ್ವರ ಅಂಞಾಟಂಬಲ ಶ್ರೀ ವೀರರ್ ಕಾವ್ ದೈವಸ್ಥಾನದಲ್ಲಿ ದೈವಗಳ ಕಳಿಯಾಟ ಮಹೋತ್ಸವ ನಡೆಯುತ್ತಿದ್ದಂತೆ ಮೊನ್ನೆ ರಾತ್ರಿ ಸಂಭವಿಸಿದ ಸುಡುಮದ್ದು ದುರಂತಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಶೇಖರನ್, ಕಾರ್ಯದರ್ಶಿ ಭರತನ್, ಪಟಾಕಿ ಸಿಡಿಸಿದ ಪಿ. ರಾಜೇಶ್ ಎಂಬಿವರು ಬಂಧಿತರಾದವರು.
ವಿಜಯನ್ ತೈಕಡಪ್ಪುರಂ (65) ಎಂಬವರನ್ನು ಕಸ್ಟಡಿಗೆ ತೆಗೆಯಲಾಗಿದೆ. ಪಟಾಕಿ ಸ್ಪೋಟಿ ಸಲು ಹೊಣೆಗಾರಿಕೆ ವಹಿಸಿಕೊಂಡ ವಿಜಯನ್ ಆ ಕೆಲಸವನ್ನು ರಾಜೇಶ್‌ರಿಗೆ ವಹಿಸಿಕೊಟ್ಟಿದ್ದರೆನ್ನ ಲಾಗಿದೆ. ಪಿ.ವಿ. ಭಾಸ್ಕರನ್, ತಂಬಾನ್, ಬಾಬು, ಚಂದ್ರನ್, ಶಶಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ದುರಂತದಲ್ಲಿ ಒಟ್ಟು ೧೫೪ ಮಂದಿ ಗಾಯಗೊಂ ಡಿದ್ದು, ಈ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ದುರಂತ ಬಗ್ಗೆ ಡಿವೈಎಸ್‌ಪಿ ಬಾಬು ಪೆರಿಂಙೋತ್ ನೇತೃತ್ವದಲ್ಲಿರುವ ಪ್ರತ್ಯೇಕ ತಂಡ ತನಿಖೆ ನಡೆಸುತ್ತಿದೆ.