ಕಾಟುಕುಕ್ಕೆ ಶಾಲೆಯಲ್ಲಿ ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮ
ಪೆರ್ಲ: ವಿದ್ಯಾರ್ಥಿಗಳು ಉತ್ತಮ ಮಾನಸಿಕ ದೃಢತೆಯನ್ನು ಹೊಂದಿದ್ದು ವಿಪತ್ತುಗಳನ್ನು ಎದುರಿಸಲು ಸದಾ ಸಿದ್ಧರಾಗಿರಬೇಕೆಂದು ನಿವೃತ್ತ ಹಿರಿಯ ಫಯರ್ ಆಫೀಸರ್ ಮನೋಹರ್ ನುಡಿದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಗ್ನಿ ಅವಘಡ ಮತ್ತು ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಎನ್‌ಎಸ್‌ಎಸ್, ಎನ್‌ಸಿಸಿ, ಸೌಹೃದ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೇರಳ ಫಯರ್ ಆಂಡ್ ರೆಸ್ಕ್ಯೂ ಸರ್ವೀಸ್‌ನವರು ನೇತೃತ್ವ ನೀಡಿದರು. ಶಾಲಾ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಉದ್ಘಾಟಿಸಿದರು. ಜೀವನ್, ಅರುಣಾ ನಾಯರ್, ಪದ್ಮನಾಭ ಶೆಟ್ಟಿ, ರಾಜೇಶ್, ಕೃಷ್ಣ ಕುಮಾರಿ, ವಾಣಿ ಕೆ. ಮಾತನಾಡಿದರು. ಅಧ್ಯಾಪಕರು, ಎನ್‌ಸಿಸಿ, ಎನ್‌ಎಸ್‌ಎಸ್, ಕ್ಲಬ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.