ನೀಲೇಶ್ವರ ಸುಡುಮದ್ದು ದುರಂತ ಸಾವು: ಮಡಿದ ಕುಟುಂಬದವರಿಗೆ ತಲಾ 25ಲಕ್ಷ ರೂ.ನಂತೆ ನಷ್ಟ ಪರಿಹಾರ ನೀಡಬೇಕು-ನ್ಯಾ. ಕೆ.ಶ್ರೀಕಾಂತ್

ಕಾಸರಗೋಡು: ನೀಲೇಶ್ವರ ಅಞೂಟಂಬಲ ಕ್ಷೇತ್ರದಲ್ಲಿ ಕಳಿಯಾಟ ನಡೆಯುತ್ತಿದ್ದ ವೇಳೆ ಸುಡುಮದ್ದು ದುರಂತದಲ್ಲಿ ಮಡಿದವರ ಕುಟುಂಬ ಗಳಿಗೆ ತಲಾ 25 ಲಕ್ಷ ರೂ.ನಂತೆ ನಷ್ಟ ಪರಿಹಾರ ನೀಡಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾ. ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದ ಆಧಾರಸ್ತಂಭವೇ ನಷ್ಟಗೊಂಡಿದೆ ಮಾತ್ರವಲ್ಲ ಆ ಕುಟುಂಬದವರು ಈಗ ಅನಾಥ ರಾಗಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ಅವರಿಗೆ ನಷ್ಟ ಪರಿಹಾರ ನೀಡಲು ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page