ಮೀನು ವ್ಯಾಪಾರಿಯ ಆತ್ಮಹತ್ಯೆ: ಯುವತಿ ಸೆರೆ

ಕಾಸರಗೋಡು: ಮೀನು ವ್ಯಾಪಾರಿಯಾದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಓವೆ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಕ್ಕರ ಕಾವುಂಚಿ ರದ ಮೀನು ವ್ಯಾಪಾರಿ  ಕೆ.ವಿ. ಪ್ರಕಾಶನ್‌ರ   ಸಾವಿಗೆ ಸಂಬಂ  ಧಿಸಿ ಮೀನು ವ್ಯಾಪಾರಿಯಾಗಿರುವ ಮಡಿವಯಲ್ ನಿವಾಸಿ ಸಿ. ಶೀಬಾ (37) ಎಂಬಾಕೆಯನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಈಕೆ ವಿರುದ್ಧ ಆತ್ಮಹತ್ಯೆ ಪ್ರೇರಣೆ ಆರೋಪ ಹೊರಿಸಲಾಗಿದೆ.  ಶೀಬಾ ನೀಡಿದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಮನನೊಂದಿದ್ದ ಪ್ರಕಾಶನ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾ ಗುತ್ತಿದೆ. ಎರಡು ತಿಂಗಳ ಹಿಂದೆ ಪ್ರಕಾಶನ್ ಕಾಡಂಕೋಡ್‌ನ ಜೈಹಿಂದ್ ವಾಚನಾಲಯ ಸಮೀಪದ ಹಳೆ ಕಟ್ಟಡದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು.  ಪೊಲೀಸರಿಗೆ ನೀಡಿದ ದೂ ರನ್ನು ಹಿಂತೆಗೆಯಬೇಕಾದರೆ ಎರಡೂ ವರೆ ಲಕ್ಷ ರೂಪಾಯಿ ನೀಡ ಬೇಕೆಂದು ಯುವತಿ  ತಿಳಿಸಿರುವುದಾಗಿ  ಪ್ರಕಾಶನ್ ಬರೆದಿಟ್ಟ ಪತ್ರ ಲಭಿಸಿತ್ತು. ಇವರ ಸಾವಿಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಬೇಕೆಂ ದು ಮನೆಯವರು  ಆಗ್ರಹಪಟ್ಟಿದ್ದವು.

RELATED NEWS

You cannot copy contents of this page