ಕೇರಳ ಮರಾಟಿ ಶಾರದೋತ್ಸವ ಸಮಿತಿ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿ ಮಹಾಸಭೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆ ಯಿತು. ಡಾ. ಕೇಶವ ನಾಯ್ಕ ಖಂಡಿಗೆ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಕೇಶವ ವಿದ್ಯಾನಗರ ಅಧ್ಯಕ್ಷತೆ ವಹಿಸಿದರು. ಸ್ಥಾಪಕ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ ಅವಲೋಕನ ನಡೆಸಿದರು. ಸಂಚಾಲಕ ಕೃಷ್ಣ ಬದಿಯಡ್ಕ, ಮರಾಟಿ ಯೂತ್ ಫೆಡರೇಶನ್ ಅಧ್ಯಕ್ಷ ಪ್ರಸಾದ್ ಕಿನ್ನಿಮಾಣಿ ಉಪಸ್ಥಿತರಿದ್ದರು. ಲೆಕ್ಕ ಪತ್ರ ಮಂಡಿಸಲಾಯಿತು. ಸುಬ್ರಹ್ಮಣ್ಯ ಕನಕಪ್ಪಾಡಿ ಸ್ವಾಗತಿಸಿ, ವರದಿ ಮಂಡಿಸಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ಕೇಶವ ವಿದ್ಯಾನಗರ, ಕಾರ್ಯದರ್ಶಿ ಯಾಗಿ ಕೆ.ಕೆ. ನಾಯ್ಕ ಮಂಗಳೂರು, ಕೋಶಾಧಿಕಾರಿಯಾಗಿ ಚಂದ್ರಕಲಾ ಲಕ್ಷ್ಮಣ್ ಬದಿಯಡ್ಕ, ಲೆಕ್ಕ ಪರಿಶೋಧಕರಾಗಿ ಶ್ರೀನಿವಾಸ ಪೆರಡಾಲ, ಸಂದೀಪ್ ಪೆರಡಾಲ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.