ಭಾಷಣ ವೇಳೆ ಕುಸಿದು ಬಿದ್ದ ಕೆ.ಪಿ. ಸತೀಶ್ಚಂದ್ರನ್
ಕಾಸರಗೋಡು: ಸಿಪಿಎಂ ಏರಿಯಾ ಸಮಿತಿ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದ ವೇಳೆ ಸಿಪಿಎಂ ಮಾಜಿ ಜಿಲ್ಲಾ ಕಾರ್ಯದರ್ಶಿ ಹಾಗೂ ಈಗ ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿರುವ ಕೆ.ಪಿ. ಸತೀಶ್ಚಂದ್ರನ್ ದಿಡೀರ್ ಆಗಿ ಕುಸಿದು ಬಿದ್ದ ಘಟನೆ ನಿನ್ನೆ ನಡೆದಿದೆ.
ಸಿಪಿಎಂನ ಎಳೇರಿ ವಲಯ ಸಮ್ಮೇನದಂಗವಾಗಿ ನಡೆದ ಪ್ರತಿನಿಧಿ ಸಮ್ಮೇಳನದಂಗವಾಗಿ ನಡೆದ ಪ್ರತಿನಿಧಿ ಸಮ್ಮೇಳನವನ್ನು ನಿನ್ನೆ ಬೆಳಿಗ್ಗೆ ಪ್ಲಾಚಿಕ್ಕೆರೆ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿರುವಂತೆಯೇ ಅವರು ಅಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಒಯ್ದು ತುರ್ತು ಚಿಕಿತ್ಸೆ ನೀಡಲಾಯಿತು. ಜ್ವರದಿಂದ ಬಳಲುತ್ತಿದ್ದ ಸತೀಶ್ಚಂದ್ರನ್ ಅದನ್ನು ಗಮನಿಸದೆ ಪಕ್ಷದ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ ಅವರಿಗೆ ದಿಢೀರ್ ಆಗಿ ದೈಹಿಕ ಅಸ್ವಸ್ಥತೆ ಅನುಭವಗೊಂಡು ಆ ಕೂಡಲೇ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಲೆತ್ನಿಸುತ್ತಿದ್ದ ವೇಳೆ ಅಲ್ಲೇ ಕುಸಿದು ಬಿದ್ದರು. ಅವರು ಈಗ ಕಣ್ಣೂರು ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ.