ತಲೆಹೊರೆ ಕಾರ್ಮಿಕರ ಕೆಲಸ, ಕೂಲಿ ಸಂರಕ್ಷಣೆ ಆಗ್ರಹಿಸಿ ಬಿಎಂಎಸ್ ಮಾರ್ಚ್
ಕಾಸರಗೋಡು: ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ಹೆಡ್ಲೋಡ್ ಆಂಡ್ ಮಜ್ದೂರ್ ಸಂಘ್ (ಬಿಎಂಎಸ್) ಕಾಸರಗೋಡು ಹೆಡ್ ಲೋಡ್ ಆಂಡ್ ವರ್ಕರ್ಸ್ ಬೋ ರ್ಡ್ ಕಚೇರಿಗೆ ಮಾರ್ಚ್ ನಡೆಸಿತು. 1978ರಲ್ಲಿ ಕೇರಳ ಸರಕಾರ ಜ್ಯಾರಿಗೊಳಿಸಿದ ತಲೆಹೊರೆ ಕಾರ್ಮಿಕರ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕು, ಕಾರ್ಮಿಕರ ಕನಿಷ್ಠ ಪಿಂಚಣಿ 5000 ರೂ. ಆಗಿ ಹೆಚ್ಚಿಸಬೇಕು, ಅನಧಿಕೃತವಾಗಿ ಅನ್ಯರಾಜ್ಯ ಕಾರ್ಮಿಕರಿಗೆ ನೀಡುವ 26ಎ ಕಾರ್ಡ್ಗಳನ್ನು ನಿಲ್ಲಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ ನಡೆಸಲಾಗಿದೆ. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲ ಕೃಷ್ಣನ್ ಉದ್ಘಾಟಿಸಿದರು. ಮಜ್ದೂರ್ ಸಂಘದ ಮುಳ್ಳೇರಿಯ ವಲಯ ಕಾರ್ಯದರ್ಶಿ ಸದಾಶಿವನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಪಿ. ದಿನೇಶ್ ಬಂಬ್ರಾಣ ಮಾತನಾಡಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಗುರುದಾಸ್ ಚೇನಕ್ಕೋಡು, ಮಜ್ದೂರ್ ಸಂಘದ ಪದಾಧಿಕಾರಿಗಳಾದ ಸೂರ್ಯನಾರಾಯಣ ಪರಂಕಿಲ, ನಾರಾಯಣನ್ ಪರವನಡ್ಕ, ಬಿಎಂಎಸ್ ಪದಾಧಿಕಾರಿಗಳಾದ ರಿಜೇಶ್ ಜೆ ಪಿ.ನಗರ್, ಶ್ರೀಧರ ಚೇನಕ್ಕೋಡು, ಬಾಬುಮೋನ್ ಚೆರ್ಕಳ, ರವಿ ಏತಡ್ಕ ಮಾತನಾಡಿದರು.