ಕಣಿಪುರ ಕ್ಷೇತ್ರ ಬಳಿ ಚರಂಡಿಯಿಂದ ಭೀತಿ ದುರಸ್ತಿಗೊಳಿಸಲು ಅಧಿಕಾರಿಗಳ ನಿರ್ದೇಶ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಚರಂಡಿಯೊಂದು ಅಪಾಯ ಆಹ್ವಾನಿಸುತ್ತಿದೆ. ಪಂಚಾಯತ್ ಅನುದಾನದಿಂದ ಚರಂಡಿ ನಿರ್ಮಿಸಲಾಗಿದ್ದು, ಇದನ್ನು ಮುಚ್ಚದಿರುವುದು ವಾಹನಗಳಿಗೆ ಹಾಗೂ ನಡೆದುಕೊಂಡು ಹೋಗುವವರಿಗೆ ಭೀತಿ ಸೃಷ್ಟಿಸಿದೆ. ಚರಂಡಿಯನ್ನು ಸ್ಲ್ಯಾಬ್ ಹಾಕಿ ಮುಚ್ಚಬೇಕೆಂದು ಆಗ್ರಹಿಸಿ ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ ಪಂಚಾಯತ್‌ಗೆ ದೂರು ನೀಡಿದ್ದರು. ಆದರೆ ಪಂಚಾಯತ್ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರಿಗೆ ಮಾಹಿತಿ ನೀಡಿದ್ದು, ಅವರ ನಿರ್ದೇಶದಂತೆ ತಾಲೂಕು ತಹಶೀಲ್ದಾರ್ ಶ್ರೀನಿವಾಸ್ ಸ್ಥಳ ಸಂದರ್ಶಿಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಕುಂಬಳೆ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮಾಧವನ್ ಹಾಜರಿದ್ದರು. ಚರಂಡಿಯನ್ನು ಮುಂದಿನ ತಾಲೂಕು ಅಭಿವೃದ್ಧಿ ಸಮಿತಿ ಸಭೆಗೆ ಮುಂಚಿತವಾಗಿ ದುರಸ್ತಿಗೊಳಿಸಬೇಕೆಂದು ತಹಶೀಲ್ದಾರ್ ತಿಳಿಸಿದರು. ಪಂಚಾಯತ್‌ನ ಎಇಯವರ ಅಸಡ್ಡೆಯಿಂದ ಚರಂಡಿಯ ಈ ದುಸ್ಥಿತಿಗೆ ಕಾರಣವೆಂದು ಲಕ್ಷ್ಮಣ ಪ್ರಭು ಆರೋಪಿಸಿದ್ದಾರೆ.