ಪಾಲಕ್ಕಾಡ್ನಲ್ಲಿ ಬಿಜೆಪಿಗೆ ಸೋಲು: ರಾಜೀನಾಮೆಗೆ ಮುಂದಾದ ಕೆ. ಸುರೇಂದ್ರನ್
ತಿರುವನಂತಪುರ: ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಯಲ್ಲಿ ಉಂಟಾದ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ರಾಜೀನಾಮೆಗೆ ಮುಂದಾಗಿದ್ದಾರೆ. ಈ ವಿಷಯವನ್ನು ಅವರು ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದಾರೆ. ಪಾಲ ಕ್ಕಾಡ್ ಸೋಲಿನ ನೈತಿಕ ಹೊಣೆಗಾರಿ ಕೆಯನ್ನು ವಹಿಸಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಆದರೆ ರಾಜೀ ನಾಮೆ ನೀಡಬೇಕಾದ ಅಗತ್ಯವಿಲ್ಲ ವೆಂದು ಕೇಂದ್ರ ನಾಯಕತ್ವ ತಿಳಿಸಿರುವು ದಾಗಿ ಸುರೇಂದ್ರನ್ರನ್ನು ಬೆಂಬಲಿಸು ವ ನೇತಾರರು ತಿಳಿಸಿದ್ದಾರೆ. ಪಾಲಕ್ಕಾಡ್ ಸೋಲಿನ ಕುರಿತು ಚರ್ಚೆ ನಡೆಸಲು ಬಿಜೆಪಿ ರಾಜ್ಯ ನಾಯಕತ್ವ ಸಭೆ ನಾಳೆ ಕೊಚ್ಚಿಯಲ್ಲಿ ನಡೆಯಲಿರುವಂತೆಯೇ ಕೆ. ಸುರೇಂ ದ್ರನ್ ತಾನು ರಾಜೀನಾಮೆಗೆ ಸಿದ್ಧ ನೆಂದು ಹೇಳಿದ್ದಾರೆ. ಈ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಇಂದು ಮ ಧ್ಯಾಹ್ನ ಪತ್ರಿಕಾಗೋಷ್ಠಿ ಯಲ್ಲಿ ಅವರು ತಿಳಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.