ಹಲವು ಅಬಕಾರಿ ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ಹಲವು ಅಬಕಾರಿ ಪ್ರಕರಣಗಳ ಆರೋಪಿ ಕಾಸರಗೋಡು ನೆಲ್ಲಿಕುಂಜೆ ಕಡಪುರದ ಸಂತೋಷ್ ಎಂ (ಬೌಜಿ ಸಂತೋಷ್) (36)ನನ್ನು ಅಬಕಾರಿ ತಂಡ ಬಂಧಿಸಿದೆ.

ನ. 25ರಂದು 17.28 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಸಾಗಿಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿರು ವುದಾಗಿಯೂ ಆ ವೇಳೆ ಸಾಕ್ಷಿದಾರನನ್ನು ಇರಿದು ಗಾಯಗೊಳಿಸಿ ಪರಾರಿಯಾಗಿ ನಂತರ ಅಬಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಸೇರಿದಂತೆ ಇತರ ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಆತನ ಬಗ್ಗೆ ಕಾಸರಗೋಡು ಎಕ್ಸೈಸ್ ಗುಪ್ತಚರ ವಿಭಾಗವಾದ ಜನ್ಸ್ ಆಂಡ್ ಇನ್‌ವೆಸ್ಟಿಗೇಷನ್ ಬ್ಯೂರೋ ಆಫೀಸರ್ ಇ.ಕೆ. ಬಿ. ಜೋಯ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ಅವರ ನೇತೃತ್ವದ   ತಂಡ ನಿನ್ನೆ ಆರೋಪಿಯನ್ನು ಬಂಧಿಸಿದೆ.

ಬಂಧಿತನನ್ನು ನಂತರ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ.

ಈತನನ್ನು ಬಂಧಿಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶ್ಯಾಮ್‌ಜಿತ್ ಎಂ, ಸಜಿತ್ ಕುಮಾರ್ ಮತ್ತು ಅಜೆಯ್ ಟಿ.ಸಿ. ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page