ಮಂಜೇಶ್ವರ ಶ್ರೀಮತ್ ಅನಂತೇಶ್ವರ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಡಿ.2ರಿಂದ: ರಥಾರೋಹಣ 7ರಂದು
ಮಂಜೇಶ್ವರ: ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಡಿ.2ರಿಂದ 8ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 2ರಂದು ಮಧ್ಯಾಹ್ನ 1.30ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 10.30ರ ತನಕ ಪಲ್ಲಕಿ ಉತ್ಸವ, ವಸಂತ ಪೂಜೆ, ಮಂಗಳಾರತಿ, 3ರಂದು ಬೆಳಿಗ್ಗೆ ಮೃತ್ತಿಕಾರೋಹಣ, 11ಕ್ಕೆ ಶ್ರೀ ದೇವರು ಯಜ್ಞಕ್ಕೆ ಚಿv್ತೆÊಸುವುದು, ಮಧ್ಯಾಹ್ನ 2ಕ್ಕೆ ದ್ವಜಾರೋಹಣ, ಸಂಜೆ 4ಕ್ಕೆ ಯಜ್ಞಾರತಿ ಬಲಿ, 5ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 10.30ರ ತನಕ ಬೊಂಬೆ ಚವರು ಉತ್ಸವ, ವಸಂತಪೂಜೆ, ಮಂಗಳಾರತಿ, 4ರಂದು ಬೆಳಿಗ್ಗೆ 9ಕ್ಕೆ ಹಗಲು ಉತ್ಸವ, ಮಧ್ಯಾಹ್ನ 12.30ಕ್ಕೆ ಯಜ್ಞ, 3.30ಕ್ಕೆ ಯಜ್ಞಾರತಿ ಬಲಿ, 4ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 12.30ರ ತನಕ ಮರದ ಲಾಲ್ಕಿ ಚಂದ್ರ ಮಂಡಲ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, 5ರಂದು ಬೆಳಿಗ್ಗೆ 9ಕ್ಕೆ ಸ್ವರ್ಣ ಪಲ್ಲಂಕಿ ಹಗಲು ಉತ್ಸವ, ಮಧ್ಯಾಹ್ನ ಯಜ್ಞ, ಸಂಜೆ 4ಕ್ಕೆ ಯಜ್ಞಾರತಿ ಬಲಿ, 4.30ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30ರಿಂದ 12.30ರ ತನಕ ಗರುಡ ಮಂಟಪ, ಚಂದ್ರ ಮಂಡಲ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, 6ರಂದು ಬೆಳಿಗ್ಗೆ 9.30ಕ್ಕೆ ಸ್ವರ್ಣ ಲಾಲ್ಕಿ, ಹಗಲು ಉತ್ಸವ 3.30ರವರೆಗೆ ಅಭಿಷೇಕ, ತುಲಾಭಾರ, ಸಂಜೆ 5ಕ್ಕೆ ಮಹಾಪೂಜೆ, 6ಕ್ಕೆ ಯಜ್ಞ, ಸಂಜೆ 7.30ಕ್ಕೆ ಯಜ್ಞಾರತಿ ಬಲಿ, ರಾತ್ರಿ 8ಕ್ಕೆ ಮಹಾಪೂಜೆ, ಸಮಾರಾಧನೆ, 12.30ರಿಂದ 5 ರ ತನಕ ಬೆಳ್ಳಿ ಲಾಲ್ಕಿಯಲ್ಲಿ ಮೃಗಬೇಟೆ, ಅಡ್ಡ ಪಲ್ಲಂಕಿ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, 7ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 3.30ಕ್ಕೆ ಪೂರ್ಣಾಹುತಿ, 4ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಮತ್ತು ರಥರೋಹಣಕ್ಕೆ ಹೊರಡು ವುದು, ಸಂಜೆ 5ಕ್ಕೆ ರಥಾ ರೋಹಣ, ರಾತ್ರಿ 8.30ಕ್ಕೆ ರಥಾವರೋಹಣ, ಸಮಾರಾಧನೆ, 8ರಂದು ಮಧ್ಯಾಹ್ನ 1.30ಕ್ಕೆ ಅವಭೃತ, 2.30ರಿಂದ ಮರದ ಲಾಲ್ಕಿ ಸಣ್ಣ ರಥೋತ್ಸವಗಳು, ಸಂಜೆ 5ಕ್ಕೆ ಶೇಷ ತೀರ್ಥಾ ಸ್ನಾನ, 6ಕ್ಕೆ ಧ್ವಜ ಅವರೋಹಣ, ರಾತ್ರಿ 10ಕ್ಕೆ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನಡೆಯಲಿದೆ.