ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವಕ್ಕೆ ಚಾಲನೆ
ಪೈವಳಿಕೆ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದಲ್ಲಿ 17ನೇ ವರ್ಷದ ವಾರ್ಷಿಕೋತ್ಸವಕ್ಕೆ ಇಂದು ಬೆಳಿಗ್ಗೆ ವೇದಮೂರ್ತಿ ಶ್ರೀ ವೆಂಕಟರಮಣ ಮೂಡಿತ್ತಾಯ ದೀಪ ಪ್ರಜ್ವಲನೆಗೊ ಳಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಭಜನೆ ಪ್ರಾರಂಭಗೊAಡಿತು. ದ್ವಾದಶನಾಳೀರ ಗಣಯಾಗ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತ ರ್ಪಣೆ ನಡೆಯಿತು. ಸಂಜೆ 6.30ಕ್ಕೆ ದೀಪ ವಿಸರ್ಜನೆ, ಭಜನೆ ಮುಕ್ತಾಯ, 6.30ರಿಂದ ಸುನೀತಾ ಶ್ರೀಧರ್ ಶಿಷ್ಯೆ ವೃಂದದವರಿAದ ಶಾಸ್ತಿçÃಯ ಸಂಗೀತ, ರಾತ್ರಿ 7.30ರಿಂದ ಶ್ರೀ ಅಯ್ಯಪ್ಪ ಸ್ವಾಮಿ ಕುಣಿತ ಭಜನಾ ತಂಡ ಬಾಯಿ ಕಟ್ಟೆ ಇವರಿಂದ ಕುಣಿತ ಭಜನೆ, 8.30ರಿಂದ ಧಾರ್ಮಿಕ ಸಭೆ ನಡೆಯಲಿದÀÄ್ದ ಹೊಸ ಮನೆ ಕೃಷ್ಣ ಭಟ್ ಕಲಾಯಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿ ಗಳಾಗಿ ಪ್ರೊ.ಎಂ .ಬಿ ಪುರಾಣಿಕ್, ಜಯದೇವ ಖಂಡಿಗೆ, ಶಶಿಕಲಾ ಸುವರ್ಣ, ಶ್ರೀಕೃಷ್ಣ ಗುರೂಜಿ ಉಪಸ್ಥಿತರಿರುವರು. ರಾತ್ರಿ 9.30ರಿಂದ ವಿಧುಷಿ ಡಾ.ವಿದ್ಯಾಲಕ್ಷಿ÷್ಮ ನಾಟ್ಯ ನಿಲಯ ಕುಂಬಳೆ ಇವರಿಂದ ನೃತ್ಯ ಸಂಭ್ರಮ, 11ರಿಂದ ಅಯ್ಯಪ್ಪ ಸ್ವಾಮಿ ಕೃಪಾ ಆರ್ಟ್್ಸ ಆ್ಯಂಡ್ ಸ್ಪೋರ್ಟ್್ಸ ಕ್ಲಬ್ ಬಾಯಿಕಟ್ಟೆ ಇದರ ಸದಸ್ಯರಿಂದ ತುಳುನಾಡ ಐಸಿರಿ ಕಾರ್ಯಕ್ರಮ ಜರಗಲಿದೆ.